ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನೆಲಮಂಗಲದಲ್ಲಿ ಕ್ಷುಲ್ಲಕ ಕಾರಣಕ್ಕೆ ಜೋಡಿ ಕೊಲೆ

ಬೆಂಗಳೂರು: ಈ ಹಿಂದೆ ಅಪರಿಚಿತ ವ್ಯಕ್ತಿ ಕೊಲೆ ಪ್ರಕರಣದಲ್ಲಿ ಟ್ವಿಸ್ಟ್ ಸಿಕ್ಕಿದೆ. ಬೆಂಗಳೂರು ಉತ್ತರ ತಾಲ್ಲೂಕು ಮಾದನಾಯಕನಹಳ್ಳಿ‌ ಠಾಣಾ ವ್ಯಾಪ್ತಿಯ ದೊಂಬರಹಳ್ಳಿಯಲ್ಲಿ ಕೊಲೆಯಾಗಿದ್ದ ಅಪರಿಚಿತ ವ್ಯಕ್ತಿ ಶವದ ಗುರುತು ಪತ್ತೆಯಾಗಿದೆ. ಚಾಕುವಿನಿಂದ ಇರಿದು ಕೊಲೆಗೈದ ನಾಲ್ವರು ಆರೋಪಿಗಳನ್ನ ಸದ್ಯ ಮಾದನಾಯಕನಹಳ್ಳಿಯ ಪೊಲೀಸರುಬಂಧಿಸಿ ಜೈಲಿಗಟ್ಟಿದ್ದಾರೆ.

ಇನ್ನೂ ದೊಂಬರಹಳ್ಳಿ ನಿರ್ಜನ ಪ್ರದೇಶದಲ್ಲಿ ನೆಲಮಂಗಲದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದ ಓಬನಾಯಕನಹಳ್ಳಿಯ ವೆಂಕಟರಮಣಯ್ಯ (48) ಎಂಬಾತ ಕೊಲೆಯಾಗಿದ್ದು, ಕೊಲೆಗೈದ ಶಿವರಾಜು, ಸಿದ್ಧರಾಜು, ಮಂಜುನಾಥ್, ವಿಜಯ್‌ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ವೆಂಕಟರಮಣಯ್ಯ ಹತ್ಯೆ ಬಳಿಕ ಕೃತ್ಯದಲ್ಲಿ ಭಾಗಿಯಾದ ಲೋಕೇಶ್ ಎಂಬಾತನನ್ನು ಕುಡಿದ ನಶೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಬೇರೆಡೆ ಹತ್ಯೆಗೈದು ಕುದೂರು ಸಮೀಪದ ನಿರ್ಜನ ಪ್ರದೇಶದಲ್ಲಿ ಬಿಸಾಡಿ ಹೋಗಿದ್ದ ಆರೋಪಿಗಳನ್ನ ಬಂಧಿಸಿದ್ದು, ಪೊಲೀಸ್ ತನಿಖೆ ವೇಳೆ ಡಬಲ್ ಮರ್ಡರ್ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಆರೋಪಿಗಳು ಕೃತ್ಯಕ್ಕೆ ಬಳಸಿದ ಕ್ವಾಲೀಸ್ ಕಾರು, ಮೊಬೈಲ್ ಜಪ್ತಿ ಮಾಡಿದ್ದು, ಸದ್ಯ ಬಂಧಿತ ನಾಲ್ವರು ಆರೋಪಿಗಳನ್ನ ಮಾದನಾಯಕನಹಳ್ಳಿ ಪೊಲೀಸರು ಜೈಲಿಗಟ್ಟಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

-ಸುಮಿತ್ರ, ಪಬ್ಲಿಕ್ ನೆಕ್ಸ್ಟ್, ನೆಲಮಂಗಲ ಬೆಂಗಳೂರು

Edited By : Shivu K
PublicNext

PublicNext

21/09/2022 11:56 am

Cinque Terre

26.89 K

Cinque Terre

1