ಬೆಂಗಳೂರು: ನೋಡೋದಕ್ಕೆ ಎಜುಕೇಟೆಡ್ ರೀತಿ ಕಾಣುವ ಇವ್ರು ಕಾರಲ್ಲಿ ಬಂದು ಸಿಲ್ಲಿ ಕಳ್ಳತನ ಮಾಡಿದ್ದಾರೆ. ಐ-ಟ್ವೆಂಟಿಯಲ್ಲಿ ಬಂದು ಹೂವಿನ ಪಾಟ್‌ಗಳನ್ನ ಕದ್ದಿದ್ದಾರೆ.
ಯುವಕ ಯುವತಿಯರಿಂದ ಕೃತ್ಯ ನಡೆದಿದ್ದು, ಬಸವನಗುಡಿ ಬಳಿಯ ಸ್ಟುಡಿಯೋ ಮುಂದಿದ್ದ ದೊಡ್ಡ ಪತ್ರೆ ಗಿಡದ ಕುಂಡವನ್ನು ರಾತ್ರಿ ವೇಳೆ ಜೊತೆಯಾಗಿ ಬಂದು ಕದ್ದಿದ್ದಾರೆ. ಯುವತಿ ಗ್ಲಾಸ್ ಕ್ಲೀನ್ ಮಾಡೋ ನಾಟಕ ಆಡ್ತಿದ್ರೆ ಮತ್ತೊಬ್ಬ ಡಿಕ್ಕಿಗೆ ಪಾಟ್ ಇಟ್ಟು ಎಸ್ಕೇಪ್ ಆಗಿದ್ದಾರೆ. ಯುವಕ ಯುವತಿಯ ಕಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೃತ್ಯ ನಡೆದಿದೆ.
PublicNext
19/09/2022 11:28 am