ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪ್ರೀತಿ ನಿರಾಕರಿಸಿ ಮದುವೆ ಆಗಿದ್ದ ಪ್ರಿಯತಮೆಯ ಕೊಂದು ಪಾಗಲ್ ಪ್ರೇಮಿ ಎಸ್ಕೇಪ್

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಆವತಿ ಗ್ರಾಮದಲ್ಲಿ ದುರ್ಘಟನೆ ನಡೆದಿದೆ.

ಆವತಿ ಗ್ರಾಮದ ಸೌಮ್ಯ (23) ಇತ್ತೀಚೆಗೆ ಮದುವೆ ಆಗಿದ್ದಳು. ಇದನ್ನು ಸಹಿಸದ ಸೌಮ್ಯಳ ಪ್ರಿಯಕರ ಸುಬ್ರಹ್ಮಣ್ಯ ತನಗೆ ಸಿಗದವಳು ಬೇರೆ ಯಾರಿಗೂ ಸಿಗಬಾರದೆಂಬ ಉದ್ದೇಶದಿಂದ ನವ ವಿವಾಹಿತೆ ಸೌಮ್ಯಳನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಈ ಹಿಂದೆ ಸೌಮ್ಯಾ ಮತ್ತು ಸುಬ್ರಹ್ಮಣ್ಯ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ 15 ದಿನಗಳ ಹಿಂದೆ ಮನೆಯವರು ನೋಡಿದ ಬೇರೊಬ್ಬರ ಜೊತೆ ಸೌಮ್ಯ ಮದುವೆ ಆಗಿದ್ದಳು. ಇದು ಸುಬ್ರಹ್ಮಣ್ಯನಿಗೆ ಇಷ್ಟವಿರಲಿಲ್ಲ. ನೆನ್ನೆ ಸೌಮ್ಯ ಹುಟ್ಟೂರು ಆವತಿ ಗ್ರಾಮಕ್ಕೆ ಸೌಮ್ಯಾ ಬಂದಿದ್ದ ವೇಳೆ, ಯಾರು ಇಲ್ಲದ ಸಮಯದಲ್ಲಿ ಸುಬ್ರಹ್ಮಣ್ಯನೆ ಕೊಲೆ ಮಾಡಿ ಪರಾರಿಯಾಗಿದ್ದಾನೆ. ವಿಜಯಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Edited By : Vijay Kumar
Kshetra Samachara

Kshetra Samachara

16/09/2022 03:06 pm

Cinque Terre

1.84 K

Cinque Terre

0

ಸಂಬಂಧಿತ ಸುದ್ದಿ