ಬೆಂಗಳೂರು: ಬುರ್ಕಾ ಧರಿಸಿ ಜ್ಯುವೆಲರಿಗೆ ಎಂಟ್ರಿ ಕೊಡ್ತಿರೋ ಮಹಿಳೆ. ಚಿನ್ನದ ಅಂಗಡಿಯೊಳಗೆ ಹೋಗ್ತಿದ್ದಂತೆ ಮಾಲೀಕನಿಗೆ ನಕಲಿ ಚಿನ್ನ ನೀಡಿ ಅಡವಿಟ್ಟಿದ್ದಾಳೆ. ಕ್ಷಣಾರ್ಧದಲ್ಲಿ ಹಣ ಎಗರಿಸಿ ಎಸ್ಕೇಪ್ ಹೋಗುತ್ತಿರೋ ಖತರ್ನಾಕ್ ಕಳ್ಳಿ.
ಹೌದು. ಈ ಘಟನೆ ನಡೆದಿರೋದು ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಟ್ಟೂರು ಬಡಾವಣೆಯಲ್ಲಿ. ಅಂದಹಾಗೆ ಇಲ್ಲಿನ ಶಿಥಲ್ ಜ್ಯುವೆಲರಿಗೆ ಕಳೆದ ತಿಂಗಳು ಬುರ್ಕಾ ಧರಿಸಿದ ಮಹಿಳೆ ಎಂಟ್ರಿಕೊಟ್ಟಿದ್ದಳು. ಶಾಪ್ ಒಳಗೆ ಹೋದ ಈ ಮಹಿಳೆ ಜ್ಯುವೆಲರಿ ಮಾಲೀಕನಿಗೆ ತನ್ನ ಬ್ಯಾಗ್‌ನಲ್ಲಿದ್ದ ಸರ ಕೊಟ್ಟು ನಮ್ಮ ಮನೆ ಕಾರ್ಯಕ್ರಮಕ್ಕೆ ಹಣವಿಲ್ಲ. ಸರ ಅಡವಿಟ್ಟುಕೊಂಡು ಹಣ ನೀಡಿ ಅಂತ ಕೇಳಿದ್ದಾಳೆ. ಇದೇ ವೇಳೆ ಬುರ್ಕಾ ತೆರೆದು ಕಣ್ಣನ್ನ ಮಾಲೀಕನ ಮೇಲೆ ಬಿಟ್ಟು, ಕೈಸೋಕಿಸುತ್ತಿದ್ದಂತೆ ಮಾಲೀಕ ಸರವನ್ನು ತೂಕ ಹಾಕಿದ್ದೆ ತಡ 85 ಸಾವಿರ ಹಣವನ್ನ ನೀಡಿದ್ದಾನೆ. ಮಹಿಳೆ ತಂದಿದ್ದ ಸರ ಅಸಲಿಯೋ ನಕಲಿಯೋ ಅಂತ ನೋಡದೇ ಹಣವನ್ನ ಮಹಿಳೆಗೆ ನೀಡಿದ್ದಾನೆ. ಹಣ ಪಡೆಯುತ್ತಿದ್ದಂತೆ ಮಹಿಳೆ ಅಲ್ಲಿಂದ ಆಟೋದಲ್ಲಿ ಎಸ್ಕೇಪ್ ಹಾಗಿದ್ದಾಳೆ.
ಆಟೋದಲ್ಲಿ ಬಂದಿದ್ದ ಈ ಬುರ್ಕಾದಾರಿ ಮಹಿಳೆ, ತಾನು ಈ ಹಿಂದೆ ನಿಮ್ಮ ಅಂಗಡಿಗೆ ಬಂದಿದ್ದೆ ಎಂದು ಕೈ ಮುಟ್ಟುತ್ತಿದ್ದಂತೆ ಜ್ಯುವೆಲರಿ ಮಾಲೀಕನಿಗೆ ಬ್ಲಾಕ್ ಮ್ಯಾಜೀಕ್ ಆಗಿದೆ ಎನ್ನಲಾಗಿದೆ. ಮೋಸ ಹೋದ ಸಂಬಂಧ ಮಾಲೀಕನ ದೂರಿನನ್ವಯ ಪ್ರಕರಣ ದಾಖಲಿಸಿರುವ ಯಲಹಂಕ ಉಪನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
-ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ
PublicNext
16/09/2022 08:40 am