ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದಂಪತಿ ಸೋಗಿನಲ್ಲಿ ವೃದ್ಧೆಯ ಮಾಂಗಲ್ಯ ಸರ ಕಸಿಯಲು ಯತ್ನ!; ಸಿಕ್ಕಿ ಬಿದ್ದ ವಂಚಕಿಗೆ ಗೂಸಾ

ದೊಡ್ಡಬಳ್ಳಾಪುರ: ಗಂಡ- ಹೆಂಡತಿಯ ಸೋಗಿನಲ್ಲಿ ಬೈಕ್ ನಲ್ಲಿ ಬಂದ ಸರಗಳ್ಳರು ಬಸ್ ನಿಲ್ದಾಣದಲ್ಲಿ ವೃದ್ಧೆಯ ಮಾಂಗಲ್ಯಸರ ಕೀಳಲು ಯತ್ನಿಸಿದ್ದಾರೆ. ಈ ಸಂದರ್ಭ ಗ್ರಾಮಸ್ಥರ ಕೈಗೆ ಸರಗಳ್ಳಿ ಸಿಕ್ಕಿಬಿದ್ದಿದ್ದು, ಆಕೆಗೆ ಗೂಸಾ ಕೊಟ್ಟ ಗ್ರಾಮಸ್ಥರು ಪೊಲೀಸರ ವಶಕ್ಕೆ ನೀಡಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಗ್ರಾಮದಲ್ಲಿ ಇಂದು ಮಧ್ಯಾಹ್ನ 3 ಗಂಟೆ ವೇಳೆ ಘಟನೆ ನಡೆದಿದ್ದು, ಹೆಸರಘಟ್ಟದ 75 ವರ್ಷದ ರಾಜಮ್ಮ ಮಧುರೆ ಗ್ರಾಮಕ್ಕೆ ಬಂದಿದ್ದರು. ಮತ್ತೆ ಹೆಸರಘಟ್ಟಕ್ಕೆ ಹೋಗಲು ಬಸ್ ಗಾಗಿ ಕಾಯುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಗಂಡ-ಹೆಂಡತಿ ಎಂದೇಳಿ ಅಜ್ಜಿಯನ್ನು ಮಾತನಾಡಿಸಿ, ಅಜ್ಜಿಯ ಕೊರಳಲಿದ್ದ 75 ಗ್ರಾಂ ತೂಕದ ಮಾಂಗಲ್ಯಸರ ಕೀಳಲು ಯತ್ನಿಸಿದ್ದಾರೆ. ಅದೇ ವೇಳೆ ಗ್ರಾಮಸ್ಥರನ್ನು ಕಂಡು ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಪರಾರಿಯಾಗುವ ಯತ್ನದಲ್ಲಿ ಬೈಕ್ ನಿಂದ ಬಿದ್ದ ಮಹಿಳೆ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ಮಹಿಳೆಗೆ ಗೂಸಾ ಕೊಟ್ಟ ಗ್ರಾಮಸ್ಥರು ಪೊಲೀಸರ ವಶಕ್ಕೆ ನೀಡಿದ್ದಾರೆ.

ವಂಚಕಿ ಹೆಸರು ನಂದಿನಿ, ಬೈಕ್ ನಲ್ಲಿ ಪರಾರಿಯಾದ ಖದೀಮನ ಹೆಸರು ಧರ್ಮ ಎಂದು ತಿಳಿದು ಬಂದಿದೆ. ದೊಡ್ಡಬೆಳವಂಗಲ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Edited By : Nagesh Gaonkar
PublicNext

PublicNext

15/09/2022 10:05 pm

Cinque Terre

41.31 K

Cinque Terre

2

ಸಂಬಂಧಿತ ಸುದ್ದಿ