ನೆಲಮಂಗಲ: ಸಿಲಿಕಾನ್ ಸಿಟಿ ಸೇರಿದಂತೆ ನಗರದ ಹೊರವಲಯದಲ್ಲಿ ದಿನದಿಂದ ದಿನಕ್ಕೆ ಮನೆಗಳ್ಳತನ, ಮನೆ ಮುಂದೆ ನಿಲ್ಲಿಸಿರೋ ಬೈಕ್, ಕಾರುಗಳನ್ನು ಕಳ್ಳತನ ಮಾಡುವ ಪ್ರಕರಣಗಳು ಹೆಚ್ಚಾಗಿದ್ದು,ಕಳ್ಳರ ಕೈಚಳಕ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಇದ್ರಿಂದ ಮನೆ ಮುಂದೆ ತಮ್ಮ ವಾಹನಗಳನ್ನ ನಿಲ್ಲಿಸದ ಪರಿಸ್ಥಿತಿ ಉಂಟಾಗಿದ್ದು, ನಾಗರೀಕರು ಬೆಚ್ಚಿಬಿದ್ದಿದ್ದಾರೆ.
ಕಳೆದೊಂದು ತಿಂಗಳಿಂದ ಬೆಂಗಳೂರು ನಗರ ಮತ್ತು ನೆಲಮಂಗಲ ತಾಲೂಕಿನ ದಾಬಸಪೇಟೆಯಲ್ಲಿ ರಾತ್ರಿ ವೇಳೆ ನಕಲಿ ಕೀ ಬಳಸಿ ಮನೆ ಮುಂದೆ ನಿಲ್ಲಿಸಿದ ಮೋಟಾರ್ ಸೈಕಲ್, ಕಾರುಗಳನ್ನ ರಾಜಾರೋಷವಾಗಿ ಎಗರಿಸಿಕೊಂಡು ಎಸ್ಕೇಪ್ ಆಗುತ್ತಿದ್ದಾರೆ.
ದಾಬಸ್ಪೇಟೆಯ ವಿನಾಯಕ ಬಡಾವಣೆಯ ನಿವಾಸಿ ನೀಲಕಂಠಯ್ಯ ಎಂಬುವರು ತಮ್ಮ ಮನೆ ಮುಂದೆ ನಿಲ್ಲಿಸಿದ್ದ ಮಾರುತಿ ಓಮಿನಿ ಕಾರನ್ನು ಎಗರಿಸಿ ಪರಾರಿಯಾಗಿದ್ದರು. ಕಳ್ಳರು ತೋರಿದ ಕೈಚಳಕದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದ್ರಿಂದ ಬಡಾವಣೆ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಇನ್ನೂ ದಾಬಸಪೇಟೆಯ ಕೈಗಾರಿಕಾ ಪ್ರದೇಶವಾಗಿರೋ ಕಾರಣ ಇಲ್ಲಿಗೆ ಯಾರು ಬರ್ತಾರೆ, ಯಾರು ಹೋಗ್ತಾರೆ ಅನ್ನೋದು ಗೊತ್ತಾಗೋದೆ ಇಲ್ಲ. ಅಲ್ಲದೇ ಕೆಲಸ ಮುಗಿಸಿಕೊಂಡು ಮನೆಗೆ ಬರುವರರ ಮೇಲೂ ಕೂಡಾ ಕೈಗಾರಿಕಾ ಪ್ರದೇಶದಲ್ಲಿ ಚಾಕು ತೋರಿಸಿ ಹೆದರಿಸಿ ಹಲ್ಲೆ ಮಾಡಿರೋ ದರೋಡೆ ಪ್ರಕರಣಗಳು ಕೂಡ ಹೆಚ್ಚಾಗ್ತಿವೆ.
ಹೀಗಾಗಿ ಜನರಿಗೆ ರಾತ್ರಿ ಆಗುತ್ತಿದ್ದಂತೆ ಹೊರಗಡೆ ಓಡಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಾಬಸ್ ಪೇಟೆಯ ವಿನಾಯಕ ಬಡಾವಣೆ, ಗುರುಸಿದ್ದಪ್ಪ ಲೇಔಟ್, ಜನಾತಾ ಕಾಲೋನಿಗಳಲ್ಲಿ ರಾತ್ರಿಯಲ್ಲದೆ ಹಗಲು ಕೂಡ ಕಳ್ಳರು ಯಾವುದೇ ಭಯವಿಲ್ಲದೇ ಕಳ್ಳತನ ಮಾಡುತ್ತಿದ್ದಾರೆ. ಹೀಗಾಗಿ ರಾತ್ರಿ ವೇಳೆ ಪೊಲೀಸರ ಗಸ್ತು ಜಾಸ್ತಿಯಾಗಬೇಕು ಮತ್ತು ಬ್ಯಾರಿಗೇಟ್ ಗಳನ್ನ ಅಳವಡಿಸಿ ರಾತ್ರಿ ವೇಳೆ ಓಡಾಡುವ ಅಪರಿಚಿತ ವ್ಯಕ್ತಿಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಡುವ ಮೂಲಕ ಸಾರ್ವಜನಿಕರಲ್ಲಿನ ಆತಂಕ ದೂರ ಮಾಡ್ಬೇಕು ಎಂಬುದು ಸ್ಥಳೀಯರು ಆಗ್ರಹವಾಗಿದೆ.
ಒಟ್ಟಿನಲ್ಲಿ ಬೆಂಗಳೂರಿನ ಹೆಬ್ಬಾಗಿಲಿನಂತಿರೋ ನೆಲಮಂಗಲ, ದಾಬಸ್ಪೇಟೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ರು, ಕಣ್ಮಚ್ಚಿ ಕುಳಿತಿರೋ ನಮ್ಮ ಪೊಲೀಸ್ರು ಯಾವ ರೀತಿ ಕಳ್ಳರ ಹಾವಳಿಗೆ ಬ್ರೇಕ್ ಹಾಕ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
PublicNext
15/09/2022 08:19 am