ಬೆಂಗಳೂರು: ಜಯನಗರ ಪೊಲೀಸರು ಪ್ರಮುಖ ಕಾರ್ಯಾಚರಣೆಯನ್ನ ನಡೆಸಿ ಲಕ್ಷಾಂತರ ಮೌಲ್ಯದ ಆ್ಯಶ್ ಆಯಿಲ್ ನ್ನ ರಿಕವರಿ ಮಾಡಿದ್ದಾರೆ. ವಿಚಾರಣೆ ವೇಳೆ ನಗರಕ್ಕೆ ಗಾಂಜಾ ಹಾಗೂ ಆ್ಯಶ್ ಆಯಿಲ್ ಸರಬರಾಜಾಗುತ್ತಿದ್ದ ಬಗ್ಗೆ ಆರೋಪಿ ನಯಾಜ್ ಮಾಹಿತಿ ನೀಡಿದ್ದ. ಆರೋಪಿ ನೀಡಿದ ಮಾಹಿತಿ ಮೇರೆಗೆ ಆಂಧ್ರಪ್ರದೇಶದ ಶ್ರೀಕಾಕುಳಂಗೆ ತೆರಳಿದ್ದ ಜಯನಗರ ಪೊಲೀಸರು ಸಾಗರ್ ಸಾಹೋ ಹಾಗೂ ಶೇಷಗಿರಿಯನ್ನ ಬಂಧಿಸಿದ್ದಾರೆ.
ಬಂಧಿತರಿಂದ ಬರೋಬ್ಬರಿ 20 ಲಕ್ಷ ರೂ ಮೌಲ್ಯದ 50 ಕೆ.ಜಿ ಗಾಂಜಾ ಹಾಗೂ 3 ಕೋಟಿ ರೂ ಮೌಲ್ಯದ 6 ಕೆ.ಜಿ ಆ್ಯಶೀಶ್ ಆಯಿಲ್ ವಶಕ್ಕೆ ಪಡೆದಿದ್ದಾರೆ. ಇನ್ನೂ ಜಯನಗರ ಪೊಲೀಸ್ರು ಆ್ಯಶ್ ಆಯಿಲ್ ಬಟ್ಟಿ ಇಳಿಸುತ್ತಿದ್ದ ಮೂಲ ಹುಡುಕಲು ಹೊರಟಿದ್ದಾರೆ. ಇನ್ನೂ ಇತ್ತಿಚ್ಚೆಗೆ ಸಾಕಷ್ಟು ಡ್ರಗ್ ಕೇಸ್ ಪತ್ತೆಯಾಗ್ತಿದ್ರು, ನಗರಕ್ಕೆ ಈ ಮಾದಕವಸ್ತುಗಳ ಸರಬರಾಜು ಮಾತ್ರ ಕಡಿಮೆಯಾಗ್ತಿಲ್ಲ.
PublicNext
13/09/2022 06:33 pm