ಆನೇಕಲ್: ಹೆಂಡತಿಯ ಅಧಿಕಾರವನ್ನು ಗಂಡ ದುರ್ಬಳಕೆ ಮಾಡಿಕೊಂಡು ದರ್ಪ ತೋರಿರೋ ಘಟನೆ ಸಮಂದೂರು ಗ್ರಾಮ ಪಂಚಾಯಿತಿಯ ಕುವೆಂಪು ನಗರದಲ್ಲಿ ನಡೆದಿದೆ.
ಕುವೆಂಪು ನಗರದ ಗ್ರಾಮ ಪಂಚಾಯತಿ ಸದಸ್ಯೆಯಾಗಿ ಸುಮಿತ್ರ ಸುರೇಶ ಗೌಡ ಆಯ್ಕೆಯಾಗಿದ್ದಾರೆ. ಆದರೆ ಹೆಂಡತಿಯ ಅಧಿಕಾರವನ್ನು ಗಂಡ ದುರುಪಯೋಗ ಮಾಡಿಕೊಂಡು ದರ್ಪ ಮಾಡುತ್ತಿದ್ದಾರೆ ಅಂತ ಆರೋಪ ಕೇಳಿ ಬಂದಿದೆ. ಹೀಗಾಗಿ ಗಂಡನ ಉಪಟಳ ತಾಳಲಾರದೆ ಊರಿನ ಗ್ರಾಮಸ್ಥರು ಸ್ಥಳೀಯ ಮೊಬೈಲ್ ನಲ್ಲಿ ದರ್ಪ ದಬ್ಬಾಳಿಕೆ ಸೆರೆ ಹಿಡಿದಿದ್ದಾರೆ.
ಕುವೆಂಪು ನಗರದಲ್ಲಿ ವಾಸವಾಗಿರುವ ಮುನಿಸ್ವಾಮಿ ಗೌಡ, ಮನೆ ಮುಂದೆ ನೀರಿನ ಪೈಪ್ ಅಳವಡಿಕೆ ಮಾಡಲು ಪಂಚಾಯಿತಿಯಿಂದ ಅನುಮತಿ ಪಡೆದು, ಕೆಲಸ ಮಾಡುವಾಗ ಗ್ರಾಮದ ಸದಸ್ಯೆ ಸುಮಿತ್ರಾ ಅವರ ಗಂಡ ಸುರೇಶ ಗೌಡ,
"ನನ್ನ ಅನುಮತಿಯಿಲ್ಲದೆ ಹೇಗೆ ನೀನು ಕೆಲಸ ಮಾಡುತ್ತಿದ್ದೀಯಾ !?? ನಮ್ಮನ್ನು ಕೇಳಿಕೊಂಡು ತಾನೇ ಕೆಲಸ ಮಾಡಬೇಕು?" ಅಂತ ಫುಲ್ ಅವಾಜ್ ಹಾಕಿದ್ದಾರೆ. ಸುರೇಶ್ ಗೌಡರ ಈ ದೌರ್ಜನ್ಯ ದಬ್ಬಾಳಿಕೆ ನಡೆಸುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಇದೆ ಗ್ರಾಮದ ಯುವಕರು ಸುರೇಶ ಗೌಡನ ವಿರುದ್ಧ ಸಮಂದೂರು ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ತಾಲೂಕು ನಿರ್ವಹಣಾಧಿಕಾರಿ ದೂರು ನೀಡಿದ್ದಾರೆ.
Kshetra Samachara
05/02/2022 11:30 pm