ನೆಲಮಂಗಲ: 20 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ದಂಪತಿ ನಡುವೆ ಬಳಿಕ ದಿನನಿತ್ಯವೂ ಜಗಳ ನಡೆಯುತ್ತಿತ್ತು. ಅದೇ ರೀತಿ ನಿನ್ನೆಯೂ ಕೂಡ ಮನೆಯಲ್ಲಿ ಜಗಳ ನಡೆದು ರಾತ್ರಿ ಮಲಗಿದ್ದ ವೇಳೆ ಚಾಕುವಿನಿಂದ ಪತ್ನಿಯ ಕುತ್ತಿಗೆ ಕೊಯ್ದು ಪ್ರಾಣ ತೆಗೆದ ಪತಿ ಪರಾರಿಯಾದ ಘಟನೆ ನೆಲಮಂಗಲ ತಾಲೂಕಿನ ಶಾಂತಿನಗರದಲ್ಲಿ ನಡೆದಿದೆ.
35 ವರ್ಷದ ಮಂಜುಳಾ ಸಾವನ್ನಪ್ಪಿದ್ದು, ನಿನ್ನೆ ನಡುರಾತ್ರಿ ಪತಿ ಶಿವರಾಜ್ ಕೈಯಲ್ಲಿ ಭೀಕರ ಅಂತ್ಯ ಕಂಡಿದ್ದಾಳೆ! ಪೈಂಟಿಂಗ್ ಕೆಲಸ ಮಾಡ್ತಿದ್ದ ಪತಿ ಶಿವರಾಜ್, ವಾರಕ್ಕೊಮ್ಮೆ ಮನೆಗೆ ಬರುತ್ತಿದ್ದ. ನಿನ್ನೆ ಕಂಠಪೂರ್ತಿ ಕುಡಿದು ಪತ್ನಿ ಮಂಜುಳಾ ಜತೆ ಜಗಳವಾಡಿ ನಾದಿನಿಯನ್ನು ಮನೆಯಿಂದ ಆಚೆ ಅಟ್ಟಿ ರಾತ್ರಿ ಮನೆಯಲ್ಲಿ ಇಬ್ಬರೇ ಮಲಗಿದ್ರು.
ಅಲ್ಲದೆ, ಪತಿ-ಪತ್ನಿ ಇಬ್ಬರಿಗೂ ಮದ್ಯದ ಚಟ ಬೇರೆ. ಕುಡಿದ ನಂತರ ಆಕೆ ನಿದ್ರೆಗೆ ಜಾರಿದ್ದ ವೇಳೆ ಶಿವರಾಜ್ ಚಾಕುವಿನಿಂದ ಪತ್ನಿಯ ಕುತ್ತಿಗೆ ಕೊಯ್ದು ಪರಾರಿಯಾಗಿದ್ದಾನೆ. ನೆಲಮಂಗಲ ಗ್ರಾಮಾಂತರ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಪತ್ತೆಗಾಗಿ 2 ಪ್ರತ್ಯೇಕ ತಂಡ ರಚಿಸಿ, ಬಲೆ ಬೀಸಿದ್ದಾರೆ.
-ಸುಮಿತ್ರ, ಪಬ್ಲಿಕ್ ನೆಕ್ಸ್ಟ್ ನೆಲಮಂಗಲ
PublicNext
10/10/2022 10:03 pm