ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೆಟ್ಟಿಂಗ್ ಹೆಸರಲ್ಲಿ ಸುಲಿಗೆ ಆರೋಪ: ಪಿಎಸ್‌ಐ ಸೇರಿ ಐವರು ಪೊಲೀಸರು ಅಮಾನತ್ತು

ಬೆಂಗಳೂರು: ಬೆಟ್ಟಿಂಗ್ ಅಡ್ಡೆ ಮೇಲೆ ಪೊಲೀಸರು ದಾಳಿಮಾಡಿದಂತೆ ನಟಿಸಿ ಹಣ ಪೀಕಿದ್ದ ಪ್ರಕರಣಲ್ಲಿ ಇಬ್ಬರು ಪಿಎಸ್‌ಐ ಸೇರಿ ಐವರು ಪೊಲೀಸರು ಅಮಾನತಾಗಿದ್ದಾರೆ.

ಸದಾಶಿವನಗರ ಪಿಎಸ್‌ಐ ಮೋಹನ್ ಬಸವರಾಜು, ಕಾನ್ಸ್ಟೇಬಲ್ ಶಿವಕುಮಾರ್, ಕ್ರೈಂ ಸ್ಟಾಫ್ ಪರಶುರಾಮ್, ನಾಗರಾಜ್ ಸೇರಿದಂತೆ ಐವರನ್ನು ಹಿರಿಯ ಅಧಿಕಾರಿಗಳು ಅಮಾನತ್ತುಗೊಳಿಸಿದ್ದಾರೆ. ತಮ್ಮದಲ್ಲದ ವ್ಯಾಪ್ತಿಯ ಸಹಕಾರ ನಗರದಲ್ಲಿ ಬುಕ್ಕಿಗಳೆಂದು ಉದ್ಯಮಿ‌ ಯೋಗೇಶ್ ಎಂಬುವರನ್ನ ಬೆದರಿಸಿ ಶಿವಕುಮಾರ್ ಮೂರು ಲಕ್ಷ ಹಣ ಪಡೆದಿದ್ರು.

ಈ ವಿಚರಾವನ್ನ ಯೋಗೇಶ್ ಈಶಾನ್ಯ ಡಿಸಿಪಿ ಅನೂಪ್ ಶೆಟ್ಟ ಗೆ ಲಿಖಿತ ದೂರು ನೀಡಿದ್ರು. ಈ ದೂರಿನ ತನಿಖೆ ನಡೆಸಿದ ಯಲಹಂಕ ಎಸಿಪಿ ವರದಿ ನೀಡಿದ್ದು ವರದಿ ಆದಾರದ ಮೇಲೆ ಐವರನ್ನ ಅಮಾನತ್ತು ಮಾಡಲಾಗಿದೆ. ಸಹಕಾರ ನಗರದ ಉದ್ಯಮಿಯೊಬ್ಬರಿಗೆ ಬೆಟ್ಟಿಂಗ್ ವಿಚಾರವಾಗಿ ಅರೆಸ್ಟ್ ಮಾಡ್ತೀವಿ. ಸದಾಶಿವನಗರ ಪೊಲೀಸ್ರು ಅಂತ ಬೆದರಿಸಿ ಹಣ ಪೀಕಿರೋದು ವರದಿಯಲ್ಲಿ ಕಂಡು ಬಂದಿತ್ತು. ಈ ಹಿನ್ನೆಲೆ ಐವರನ್ನು ಅಮಾನತು ಮಾಡಲಾಗಿದೆ.

Edited By : Nagaraj Tulugeri
PublicNext

PublicNext

08/10/2022 03:00 pm

Cinque Terre

18.32 K

Cinque Terre

2