ಬೆಂಗಳೂರು: ಚೀನಾ ಮೂಲದ ಲೋನ್ ಆ್ಯಪ್ಗಳ ಹೆಡೆಮುರಿ ಕಟ್ಟಲು ಸಜ್ಜಾಗಿರೋ ಬೆಂಗಳೂರು ಪೊಲೀಸ್ರು, ಒಂದು ವರ್ಷದಲ್ಲಿ ನೂರು ಕೋಟಿಗೂ ಹೆಚ್ಚಿನ ಹಣ ಫ್ರೀಜ್ ಮಾಡಿದ್ದಾರೆ.
ಈ ನಕಲಿ ಲೋನ್ ಆ್ಯಪ್ ಗಳಿಂದ ಸಾಕಷ್ಟು ಮಂದಿ ಮಾನ- ಪ್ರಾಣ ಕಳೆದುಕೊಂಡಿದ್ರು. ಹೀಗಾಗಿ ಸಾಲ ಕೊಡುವ ಈ ಚೈನೀಸ್ ಲೋನ್ ಆ್ಯಪ್ಗಳ ಹಾವಳಿ ನಿಯಂತ್ರಿಸಲು ಬೆಂಗಳೂರು ನಗರ ಪೊಲೀಸ್ರು ಬೆನ್ನು ಬಿದ್ದು,2ರಿಂದ 7 ಸಾವಿರದ ವರೆಗೆ ಸಾಲ ಕೊಟ್ಟು, ಅದನ್ನು ಮರುಪಾವತಿ ಮಾಡದ ಗ್ರಾಹಕರಿಗೆ ಅಶ್ಲೀಲ ಸಂದೇಶ ಹಾಗೂ ಬೈಗುಳ ಕಿರುಕುಳ ಕೊಡುತ್ತಿದ್ದ ಆನ್‌ಲೈನ್ ಲೋನ್ ಆ್ಯಪ್ಗಳ ಉಪಟಳಕ್ಕೆ ಬ್ರೇಕ್ ಹಾಕಲು ನಗರ ಪೊಲೀಸ್ರು ಸಜ್ಜಾಗಿದ್ದಾರೆ.
ಹೀಗಾಗಿಯೇ ಬೆಂಗಳೂರು ನಗರ ಪೊಲೀಸರು, ಅಧಿಕಾರಿಗಳು ಕಳೆದ ಒಂದು ವರ್ಷದಿಂದ ಲೋನ್ ಆ್ಯಪ್ಗಳ ಕೇಸ್ಗಳಲ್ಲಿ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಸುಮಾರು ನೂರು ಕೋಟಿ ಹಣ ಫ್ರೀಜ್ ಮಾಡಿದ್ದಾರೆ.
ಈಗಾಗಲೇ ಹಲವು ಮಂದಿ ಆರೋಪಿಗಳನ್ನು ಬಂಧಿಸಿ, ಕೋಟ್ಯಂತರ ರೂ. ಫ್ರೀಜ್ ಮಾಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ನಗರದ 8 ಸೆನ್ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳಿಂದ 40 ಕೋಟಿಗೂ ಅಧಿಕ ಹಾಗೂ ಸಿಸಿಬಿ ತನಿಖೆ ನಡೆಸುತ್ತಿರುವ 18 ಪ್ರಕರಣಗಳಲ್ಲಿ ಅಂದಾಜು 70 ಕೋಟಿ ಹಣವನ್ನು ಈ ಆ್ಯಪ್ಗಳಿಗೆ ಸಂಬಂಧಿಸಿದ ವಿವಿಧ ಬ್ಯಾಂಕ್ ಖಾತೆಗಳಿಂದ ಫ್ರೀಜ್ ಮಾಡಲಾಗಿದೆ.
ಸಿಸಿಬಿ ಪೊಲೀಸರು ಭೇದಿಸಿರುವ 18 ಪ್ರಕರಣಗಳಲ್ಲಿ ಫ್ರೀಜ್ ಆದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಇ.ಡಿ.ಗೆ ವರ್ಗಾಯಿಸಲು ನಿರ್ಧರಿಸಿದ್ದಾರೆ.
PublicNext
07/10/2022 07:24 pm