ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಟೆಲಿಗ್ರಾಂ ಮೂಲಕ ಬ್ಯಾಂಕ್ ಖಾತೆಗೆ ಕನ್ನ: ಅರೆಸ್ಟ್ ಆದ ಖದೀಮ

ಬೆಂಗಳೂರು: ಟೆಲಿಗ್ರಾಂನಲ್ಲಿ ಪರಿಚಯ ಇಲ್ಲದವ್ರ ನಕಲಿ ಸಿಮ್ ಕಾರ್ಡ್, ನಕಲಿ ಪಾಸ್ ಬುಕ್ ಪಡೆದು ಅದನ್ನ ಬಳಸಿ ಜನರ ಬ್ಯಾಂಕ್ ಖಾತೆಗೆ ಕನ್ನ ಹಾಕ್ತಿದ್ದ ಖತರ್ನಾಕ್ ಸೈಬರ್ ಚೋರರ ಗ್ಯಾಂಗ್ ಈಗ ಅಂದರ್ ಆಗಿದೆ.

ಸೈಬರ್ ಚೋರರು ಸೋಶಿಯಲ್ ಮೀಡಿಯಾ ಬಳಸಿಕೊಂಡು ಜನರ ಮೊಬೈಲ್ಗೆ ಆಗಾಗ ಲಿಂಕ್ ಕಳಿಸ್ತಿರ್ತಾರೆ. ಗ್ರಹಚಾರ ಕೆಟ್ಟು ಯಾರಾದ್ರೂ ಓಪನ್ ಮಾಡಿದ್ರೆ, ಅವರ ಬ್ಯಾಂಕ್ ಖಾತೆಗೆ ಕನ್ನ ಬೀಳೋದು ಗ್ಯಾರಂಟಿ. ಹೀಗೆ ನಕಲಿ ಸಿಮ್ ಕಾರ್ಡ್ ಹಾಗೂ ನಕಲಿ ಬ್ಯಾಂಕ್ ಖಾತೆ ಬಳಸಿ ಜನರಿಗೆ ಸಾಮಾಜಿಕ ಜಾಲತಾಣದ ಮೂಲಕ ಲಿಂಕ್ ಕಳುಹಿಸಲಾಗ್ತಿತ್ತು. ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕಿ ಹಣ ದೋಚ್ತಿದ್ದ ಸೈಬರ್ ಸುಲಿಗೆ ಕೋರರನ್ನ ಈಶಾನ್ಯ ವಿಭಾಗದ ಯಲಹಂಕದ ಸೆನ್ ಠಾಣೆ ಪೊಲೀಸ್ರು ಬಂಧಿಸಿದ್ದಾರೆ. ಕೇರಳ ಮೂಲದ ಶನೀದ್ ಅಬ್ದುಲ್ ಹಮೀದ್(29) ಬಂಧಿತ ಖದೀಮ.

ಕೇರಳದಿಂದ ಬೆಂಗಳೂರಿಗೆ ಬಂದು ಮನೇಲಿ ವಾಸವಿದ್ದ ಈತ ಟೆಲಿಗ್ರಾಂನಲ್ಲಿ ಆ್ಯಕ್ಟೀವ್ ಆಗಿದ್ದ. ಈತ ಮುಖ ಪರಿಚಯ ಇಲ್ಲದವರ ಬಳಿ ಸಿಮ್ ಕಾರ್ಡ್, ಪಾಸ್ ಬುಕ್ಗಳನ್ನ ಖರೀದಿಸ್ತಿದ್ದ. ಅದನ್ನ ಬಳಸಿ ಜನರನ್ನ ವಂಚಿಸಲು ನಕಲಿ ಸಿಮ್ಕಾರ್ಡ್ ಬಳಸಿ, ಬಂದ ಹಣನ ನಕಲಿ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ತಿದ್ದ.

ಬಂಧಿತನಿಂದ ಈಶಾನ್ಯ ವಿಭಾಗದ ಯಲಹಂಕದ ಸೆನ್ ಪೊಲೀಸರು 222 ನಕಲಿ ಸಿಮ್ ಕಾರ್ಡ್, 10 ಮೊಬೈಲ್, 10 ಡೆಬಿಟ್ ಕಾರ್ಡ್ಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿ ಶನೀದ್ ಅಬ್ದುಲ್ ಹಮೀದ್ ತನ್ನ ಸಹೋದರ ಅಬ್ದುಲ್ ನಿಹಾಲ್ ಜೊತೆ ಸೇರಿ ಜನರನ್ನು ವಂಚಿಸ್ತಿದ್ದ. ಸದ್ಯ ನಿಹಾಲ್ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಬೆಂಗಳೂರು

Edited By : Manjunath H D
PublicNext

PublicNext

30/09/2022 10:56 pm

Cinque Terre

61.57 K

Cinque Terre

3