ಬೆಂಗಳೂರು: ಪಿಎಫ್‌ಐ ಬಂಧಿತ ಆರೋಗಳ ಮೊಬೈಲ್ ರಿಟ್ರುವ್ ಡೇಟಾ ಕೆ.ಜಿ. ಹಳ್ಳಿ ಪೊಲೀಸ್ರ ಕೈ ಸೇರಿದೆ. ರಿಪೋರ್ಟ್‌ನಲ್ಲಿ ಸ್ಪೋಟಕ ಮಾಹಿತಿ ಲಭ್ಯವಾಗಿದ್ದು, 55 ಮೊಬೈಲ್‌ಗಳಲ್ಲಿ ಅಡಗಿದ್ದ ಸಂಚಿನ ರಹಸ್ಯವನ್ನ ಪೊಲೀಸ್ರು ಪತ್ತೆ ಮಾಡಿದ್ದಾರೆ. ರಿಟ್ರೀವ್ ರಿಪೋರ್ಟ್‌ನಲ್ಲಿ ಹಿಂದುತ್ವ ಹಾಗೂ ಆರ್‌ಎಸ್ಎಸ್ ಸಿದ್ಧಾಂತದ ಬಗ್ಗೆ ಚರ್ಚೆಯಾಗಿದ್ದು ಕೆಲವು ಕಚೇರಿ ಹಾಗೂ ಮೊಬೈಲ್‌ಗಳಲ್ಲಿ ಹಿಂದೂ ಮುಖಂಡರ ಪೋಟೋಗಳು ಪತ್ತೆ ಕೂಡ ಪತ್ತೆಯಾಗಿದೆ. ರಾಜಕೀಯವಾಗಿ ಸಂಘಟನೆ ಬಲ ಪಡಿಸಲು ಟೆಕ್ನಿಕಲ್ ಆಗಿ ಪ್ಲಾನ್ ಮಾಡಿದ್ದ ಆರೋಪಿಗಳು ಹಿಜಾಬ್, ಹಲಾಲ್ ಕಟ್, ಆಜಾನ್ ವಿವಾದದ ಬಳಿಕ ಸಂಘಟನೆಯನ್ನ ಮತ್ತಷ್ಟು ಚುರುಕುಗೊಳಿಸಿದ್ರು.
ಮಸಲ್ಮಾನರು ಮುಸಲ್ಮಾನರ ಬಳಿಯೇ ವ್ಯವಹಾರ ನಡೆಸುವಂತೆ ಚರ್ಚೆ ಹಾಗೂ ಪ್ರೇರೇಪಣೆ ಜೊತೆ ಜೊತೆಗೆ ವಾರಕ್ಕೊಮ್ಮೆ ಸಭೆ ಆಯೋಜಿಸುತ್ತಿದ್ದ ಆರೋಪಿಗಳು ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಕಲಬುರ್ಗಿ, ದಾವಣಗೆರೆ, ಉಡುಪಿ ಹಾಗೂ ಕೇರಳದಲ್ಲಿ ಸರಣಿ ಸಭೆಗಳ ಬಗ್ಗೆ ಚರ್ಚೆ ಮಾಡಿರೋದು ಮೊಬೈಲ್ ಡೇಟಾದಲ್ಲಿ ಪತ್ತೆಯಾಗಿದೆ.
ಸಭೆ ಸೇರುವ ಹಿಂದಿನ ದಿನ ಆಯೋಜಕರಿಂದ ವಿಶೇಷ ಸೂಚನೆ ರವಾನೆಯಾಗಿ ಸಭೆಗೆ ಬರುವವರು ಬಸ್ಸಲ್ಲೆ ಬರ್ಬೇಕು. ಮೊಬೈಲ್ ಇಲ್ಲದೇ ಬರ್ಬೇಕೆಂದು ಸೂಚನೆ ಕೂಡ ಕೊಡ್ತಿದ್ರು. ಎಲ್ಲಿ ಸೇರಬೇಕೆಂದು ನಿರ್ಧರಿಸಿದ್ದ ಸ್ಥಳ ಲೊಕೇಷನ್ ಪಾಸ್ ಮಾಡಿ ಬಳಿಕ ಡಿಲಿಟ್ ಮಾಡಿರೋದು ಪತ್ತೆಯಗಿದೆ. ತರಬೇತಿಯಲ್ಲಿ ಇಸ್ಲಾಮಿಕ್ ಪಾಠ ಭೋಧಿಸಲಾಗ್ತಿತ್ತು. ಬಳಿಕ ಐ ಶ್ರೇಡರ್ ಆಪ್ ಮೂಲಕ ಡೇಟಾ ಡಿಲಿಟ್ ಮಾಡಿದ್ದ ಆರೋಪಿಗಳ ಅಸಲಿಯತ್ತು ಐ ಶ್ರೇಡರ್ ಆಪ್ ರಿಟ್ರೀವ್ ವರದಿಯಲ್ಲಿ ಬೆಳಕಿಗೆ ಬಂದಿದೆ.
ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದ ಆರೋಪಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಆರೋಪಿಗಳಿಗೆ ಬೇಲ್ ಕೊಡಿಸಿರುವ ಬಗ್ಗೆಯೂ ಮಾತುಕತೆ ನಡೆಸಿರುವುದು ಪತ್ತೆಯಾಗಿದ್ದು, ರುದ್ರೇಶ್ ಕೊಲೆ ಪ್ರಕರಣದ ಆರೋಪಿಗಳು ಸಂಪರ್ಕದಲ್ಲಿರೋ ಸಾಧ್ಯತೆ ಬಗ್ಗೆ ತನಿಖೆ ಮುಂದುವರಿದಿದೆ.
ಯಾರ ಕಣ್ಣಿಗೂ ಬೀಳದಂತೆ ಹಣಕಾಸು ನೋಡಿಕೊಳ್ತಿದ್ದ ಆರೋಪಿಗಳು ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಸಂಘಟನೆ ಮಾಡಿ ಸ್ಥಳೀಯ ಮಟ್ಟದಲ್ಲೇ ಹಣ ಸಂಗ್ರಹ ಹಾಗೂ ವೆಚ್ಚ ಮಾಡುತ್ತಿದ್ರು. ಹೀಗಾಗಿಯೇ ದಾಳಿ ವೇಳೆ ಕೇವಲ 33 ಲಕ್ಷ ಪತ್ತೆಯಾಗಿತ್ತು. ಸದ್ಯ ಆರೋಪಿಗಳ ವಿದ್ಯಾಭ್ಯಾಸ ಹಾಗೂ ಕೆಲಸಗಳ ಬಗ್ಗೆ ತನಿಖೆ ಮುಂದುವರೆಸಿದ್ದು ಆರೋಪಿಗಳು ಕಳೆದ ನಾಲ್ಕೈದು ತಿಂಗಳ ಟ್ರಾವೆಲ್ ಹಿಸ್ಟರಿಯನ್ನು ಪೊಲೀಸ್ರು ಕಲೆ ಹಾಕುತ್ತಿದ್ದಾರೆ.
PublicNext
30/09/2022 05:58 pm