ಯಲಹಂಕ: ಬೇಲಿಯೇ ಎದ್ದು ಹೊಲ ಮೇಯ್ದ ಕಥೆ ಇದು. ಈ ಪೋಟೊದಲ್ಲಿ ಕಾಣ್ತಿರುವ ಆನಂದ್ ಶುದ್ಧ 420 ಬೆಂಗಳೂರಿನ ಪೀಣ್ಯಾ ಅಗ್ನಿಶಾಮಕ ಠಾಣೆ ವ್ಯಾಪ್ತಿಲಿ ಕೆಲಸ ಮಾಡುತ್ತಿದ್ದ. ಸಿಸಿಬಿ ಪೊಲೀಸ್ ಎಂದು ಹೇಳಿಕೊಂಡು ಸೆಲೂನ್ ಮತ್ತು ಸ್ಪಾಗಗಳಲ್ಲಿ ಸಾವಿರ ಸಾವಿರ ದುಡ್ಡು ಪೀಕಿ ಜನರಿಗೆ ಮೋಸಮಾಡ್ತಿದ್ದ. ಅಗ್ನಿಶಾಮಕ ಪೇದೆ ಆನಂದ್ ನನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಜನರಿಗೆ ವಂಚಿಸಿದ್ದ ಪ್ರಕರಣ ಕೊಡಿಗೇಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿ, ಪೊಲೀಸರು ಆನಂದ್ ಎಂಬ ಭ್ರಷ್ಟಪೇದೆಗೆ ಕೋಳ ತೊಡಿಸಿದ್ದಾರೆ.
ಸದ್ಯ ಬೆಳಗಾವಿಯ ಅಥಣಿ ಅಗ್ನಿಶಾಮಕ ಠಾಣೆಲಿ ಆನಂದ್ ಕೆಲಸ ಮಾಡ್ತಿದ್ದ. ಆದರೆ ಬೆಂಗಳೂರಿಗೆ ಬಂದು ಸಿಸಿಬಿ ಎಸಿಪಿ ರೀನಾ ಸುವರ್ಣರ ಹೆಸರೇಳಿಕೊಂಡು ಸ್ಪಾ ಒಂದರಿಂದ ಇಪ್ಪತ್ತು ಸಾವಿರ ನಗದನ್ನ ಆಗಸ್ಟ್ ತಿಂಗಳಲ್ಲಿ ದೋಚಿದ್ದ. ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಈತ ವಿದ್ಯಾರಣ್ಯ, ಪೀಣ್ಯ ಮತ್ತು ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾರಾ ಸ್ಪಾ ಮತ್ತು ಸೆಲೂನ್ ಗೆ ತೆರಳಿ ಸುಮಾರು 6ಲಕ್ಷದ ವರೆಗೂ ಹಣ ವಸೂಲಿ ಮಾಡಿದ್ದ. ಈ ಮೊದಲು ಯಾರು ದೂರು ನೀಡದ ಕಾರಣ ಪೊಲೀಸರು ಈತನ ವಿರುದ್ಧ ಏನು ಕ್ರಮ ಜರುಗಿಸಿರಲಿಲ್ಲ. ಈಗ ಸಿಕ್ಕಿಬಿದ್ದಿದ್ದಾನೆ.
ಜೂಜು ದಂದೆ ಮತ್ತು ಬೆಟ್ಟಿಂಗ್ ಚಟಗಳ ದಾಸನಾದ ಈತ ಲಕ್ಷಾಂತರ ರುಪಾಯಿ ಸಾಲ ಮಾಡಿಕೊಂಡಿದ್ದ. ಸಾಲದ ಕಾಟ ಜಾಸ್ತಿಯಾದಾಗ ಜನರ ಬಳಿ ಪೊಲೀಸರ ಹೆಸರೇಳಿಕೊಂಡು ಸೆಲೂನ್ ಸ್ಪಾಗಳಿಂದ ಸುಲಿಗೆ ಮಾಡುತ್ತಿದ್ದ. ಮದುವೆಯಾಗಿದ್ದ ಈತ ಚಂದದ ಸರಳ ಜೀವನ ನಡೆಸದೆ, ಅತಿಯಾಸೆಗೆ ಬಿದ್ದು ಜೈಲುಸೇರಿದ್ದಾನೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್..
PublicNext
28/09/2022 08:57 pm