ಬೆಂಗಳೂರು : ಬೆಳ್ಳಂ ಬೆಳಿಗ್ಗೆ ರಾಜ್ಯ ಪೊಲೀಸ್ರು ಪಿ ಎಫ್ ಐ, ಎಸ್ ಡಿ ಪಿಐ ಮುಖಂಡರ ಮನೆ ಮೇಲೆ ದಾಳಿ ನಡೆಸಿ ಶಾಕ್ ನೀಡಿದ್ದಾರೆ. ಪಿಎಆರ್-ಪ್ರಿವೆಂಟಿವ್ ಆಕ್ಷನ್ ರಿಪೋರ್ಟ್ ನಡಿ ಮುಖಂಡರು ವಶಕ್ಕೆ ಪಡೆದು ಆಯಾ ಜಿಲ್ಲಾ ಪೊಲೀಸ್ರರು ವಿಚಾರಣೆ ನಡೆಸ್ತಿದ್ದಾರೆ. ಈವರೆಗೆ 60ಕ್ಕು ಹೆಚ್ಚು ಮುಖಂಡರನ್ನ ವಶಕ್ಕೆ ಪಡೆಯಲಾಗಿದೆ.
ವಶಕ್ಕೆ ಪಡೆದಿರುವ ಮುಖಂಡರನ್ನ ಆಯಾ ವ್ಯಾಪ್ತಿಯ ತಹಶೀಲ್ದಾರ್ ಮುಂದೆ ಹಾಜರುಪಡಿಸಲಿದ್ದಾರೆ.ತಹಶೀಲ್ದಾರ್ ಮುಂದೆ ವಶದಲ್ಲಿರೋ ಮುಖಂಡರು ಸೂಕ್ತ ರೀತಿಯಲ್ಲಿ ಬಾಂಡ್ ಶ್ಯೂರಿಟಿ ಕೊಡಬೇಕು. ಇಲ್ಲವಾದಲ್ಲಿ ಮುಖಂಡರು ಸಂಕಷ್ಟಕ್ಕೆ ಸಿಲುಕೋ ಸಾಧ್ಯತೆಯಿದೆ. ತಹಶೀಲ್ದಾರ್ ಮುಂದೆ ಬಾಂಡ್ ಶ್ಯೂರಿಟಿ ನೀಡಬೇಕು ಇದಕ್ಕೆ ತಪ್ಪಿದ್ದಲ್ಲಿ ತಹಶೀಲ್ದಾರ್ ತೆಗೆದುಕೊಳ್ಳುವ ತೀರ್ಮಾನ ಅಂತಿಮವಾಗಿರುತ್ತೆ.ಸಮಾಜದ ಸ್ವಾಸ್ಥ್ಯ, ಶಾಂತಿ ಭಂಗಕ್ಕೆ ಯತ್ನದಂತ ಆರೋಪದಲ್ಲಿ ವಶಕ್ಕೆ ಪಡೆಯಲಾಗಿದ್ದು ಬಾಂಡ್ ಕೊಡಲು ತಪ್ಪಿದ್ದಲ್ಲಿ ಜೈಲಿಗೆ ಹೋಗೋ ಸಾಧ್ಯತೆ ಎದುರಾಗಬಹುದು.
PublicNext
27/09/2022 10:30 am