ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪಿಎಫ್ಐ ಮುಖಂಡರ ಮನೆಗೆ ದಾಳಿ, ಸೆರೆ; ನಗ- ನಗದಿನ ಖಜಾನೆ ಜತೆಗೆ ಸಾವರ್ಕರ್ ಪುಸ್ತಕವೂ ಪತ್ತೆ!

ಬೆಂಗಳೂರು: ದೇಶವ್ಯಾಪಿ ಪಿಎಫ್ಐ ಮುಖಂಡರ ಮೇಲಿನ ದಾಳಿಯಲ್ಲಿ ಲಕ್ಷಾಂತರ ನಗದು ಪತ್ತೆಯಾಗಿದೆ. ಅರೆಸ್ಟ್ ಆದವರ ವಿಚಾರಣೆ ಜೊತೆಗೆ ಬ್ಯಾಂಕ್ ಪಾಸ್ ಬುಕ್ ಸೇರಿದಂತೆ ದಾಖಲಾತಿ ಪರಿಶೀಲನೆ ನಡೀತಿದೆ.

13 ರಾಜ್ಯಗಳ ಪೈಕಿ ರಾಜ್ಯಾದ್ಯಂತ ಕೂಡ ಎನ್ ಐ ಎ ಮತ್ತು ಬೆಂಗಳೂರು ಪೊಲೀಸ್ರು ಏಕಕಾಲದಲ್ಲಿ ಪಿಎಫ್ ಐ ಕಚೇರಿ ಮತ್ತು ಕಾರ್ಯಕರ್ತರ ಮನೆಗಳ ಮೇಲೆ ದಾಳಿ ಮಾಡಿ ಹಲವರನ್ನ ಅರೆಸ್ಟ್ ಮಾಡಿದ್ರು. ಎನ್ ಐಎ 7 ಮಂದಿಯನ್ನ ಅರೆಸ್ಟ್ ಮಾಡಿದ್ರೆ, ಬೆಂಗಳೂರು ಪೊಲೀಸ್ರು ಇಬ್ಬರನ್ನ ಬಂಧಿಸಿ 14 ಮಂದಿಯನ್ನ ಅರೆಸ್ಟ್ ಮಾಡಿದ್ದಾರೆ.

ಆಡುಗೋಡಿಯ ಟೆಕ್ನಿಕಲ್ ಸೆಂಟರ್ ನಲ್ಲಿ ಶಂಕಿತ ಆರೋಪಿಗಳನ್ನಿಟ್ಟು ವಿಚಾರಣೆ ನಡೆಯುತ್ತಿದ್ದು, ಇಂದು ಕೆಜಿ ಹಳ್ಳಿ ಪೊಲೀಸ್ರು ಆರೋಪಿಗಳನ್ನ ಕೋರ್ಟ್ ಗೆ ಹಾಜರು ಪಡಿಸಿ 11 ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸ್ತಿದ್ದಾರೆ. ಇನ್ನೂ ದಾಳಿ ವೇಳೆ ಪತ್ತೆಯಾದ ನಗ- ನಗದಿನ ಮೂಲ, ಧರ್ಮ ಸಂಬಂಧ ಪುಸ್ತಕ, ಪೆನ್ ಡ್ರೈವ್ , ಲ್ಯಾಪ್ ಟಾಪ್, ಮೊಬೈಲ್ , ಎಲೆಕ್ಟ್ರಾನಿಕ್ ಡಿವೈಸ್ ಗಳಲ್ಲಿ ಏನಿದೆ ಅನ್ನೋದನ್ನ ಪರಿಶೀಲನೆ ನಡೆಸ್ತಿದ್ದಾರೆ.

ಇನ್ನು, ನಿನ್ನೆಯ ಒಂದು ದಿನದ ದಾಳಿಗೆ 3 ತಿಂಗಳ ಭರ್ಜರಿ ಸಿದ್ಧತೆ ನಡೆಸಲಾಗಿತ್ತಂತೆ. ಪಿಎಫ್​ಐನ ಪ್ರತಿ ಮುಖಂಡ, ಕಾರ್ಯಕರ್ತರು, ಪ್ರಮುಖರ ಮಾಹಿತಿ ಕಲೆ ಹಾಕಿ, ಯಾವ ಟೈಂನಲ್ಲಿ ಮನೆಯಲ್ಲಿರ್ತಾರೆ, ಹೊರಗಡೆ ಹೋಗ್ತಾರೆ ಅಂತಾ ಮೊದಲೇ ಕನ್ಫರ್ಮ್ ಮಾಡ್ಕೊಳ್ಳಲಾಗಿತ್ತು.

ಕೇರಳದ ಮಲಪ್ಪುರಂನಲ್ಲಿ ಸಭೆ ಇದ್ದಿದ್ರಿಂದ ತಡವಾಗಿ ರೇಡ್ ನಡೆಸಲಾಗಿದೆ. ಸಭೆಗೆ ದೇಶದ್ಯಾಂತ ಪಿಎಫ್ ಐ ಲೀಡರ್ ಗಳು ಹಾಜರಾಗಿರೋ ಬಗ್ಗೆ ಎನ್ ಐಎ ಗೆ ಮಾಹಿತಿ ಸಿಕ್ಕಿತ್ತು. ಲೀಡರ್​ಗಳೆಲ್ಲ ಮೀಟಿಂಗ್​ಗೆ ತೆರಳಿದ್ರು ಅನ್ನೋ ಕಾರಣಕ್ಕೆ ವಿಳಂಬವಾಗಿ ನಿನ್ನೆ ರೇಡ್ ನಡೆದಿದೆ.

ಎನ್ ಐಎ ಬಂಧಿತ 7 ಜನರ ಹಿಸ್ಟರಿ ನೋಡೊದಾದ್ರೆ...

1 ಅನೀಸ್ ಅಹಮದ್

- ಪಿಎಫ್​ಐ ಸ್ಟೇಟ್ ಲೆವೆಲ್ ಲೀಡರ್

- ಕಳೆದ 10 ದಿನಗಳಿಂದ ಮೀಟಿಂಗ್​ನಲ್ಲಿದ್ದ

- ಮಲಬಾರ್ ಕಾನ್ಫರೆನ್ಸ್ ಹೆಸರಿನ​ ಮೀಟಿಂಗ್

- ಬೆಂಗಳೂರು ಮೂಲದವನಾದ ಹನೀಸ್​ ಅಹ್ಮದ್​

- ಖಾಸಗಿ ಕಂಪನಿಯಲ್ಲಿ ಸಾಫ್ಟ್​ವೇರ್ ಎಂಜಿನಿಯರ್

2 ಅಫ್ಸರ್ ಪಾಷಾ

- ಸ್ಟೇಟ್​ ಲೆವೆಲ್ ಲೀಡರ್​

- ಒಂದೂವರೆ ವರ್ಷದ ಹಿಂದೆ ಇ.ಡಿ. ರೇಡ್ ಆಗಿತ್ತು

- ಅಕ್ರಮ ಹಣ ವರ್ಗಾವಣೆ ಸಂಬಂಧ ರೇಡ್​

- ಆಗ ಮನೆಯಲ್ಲಿ ಜಗಳ ಮಾಡಿಕೊಂಡಿದ್ದ ಪಾಷಾ

- ಪಾದರಾಯನಪುರದ ಟೆಲಿಕಾಂ ಲೇಔಟ್​ನ ಬಾಡಿಗೆ ಮನೆಗೆ ಶಿಫ್ಟ್​

- ವಿಜಯನಗರದಲ್ಲಿ ಲಸ್ಸಿ ಶಾಪ್ ನಡೆಸುತ್ತಿದ್ದ ಅಫ್ಸರ್ ಪಾಷಾ

3 ಅಬ್ದುಲ್ ವಹೀದ್​

- ಜಯಮಹಲ್ ಪ್ಯಾಲೇಸ್ ಹತ್ತಿರ ವಾಸವಿದ್ದ ಅಬ್ದುಲ್

- ಮೂಲತಃ ತಮಿಳುನಾಡಿನ ಅಬ್ದುಲ್ ವಹೀದ್​

- ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ನೆಲೆಸಿದ್ದ

- ಸ್ಟೇಟ್ ಎಕ್ಸಿಕ್ಯುಟಿವ್ ಕಮಿಟಿ ಸೆಕ್ರೆಟರಿ ಆಗಿದ್ದ ಅಬ್ದುಲ್

4 ಯಾಸಿರ್ ಹಸನ್​​

- ಮೂಲತಃ ಮಂಗಳೂರಿನವನಾದ ಯಾಸಿರ್​ ಅರಾಫತ್​

- ಬೆಂಗಳೂರಲ್ಲಿ PFI ಕಾರ್ಯಚಟುವಟಿಕೆ ನೋಡಿಕೊಳ್ಳುತ್ತಿದ್ದ

- ಕಾವಲಬೈರಸಂದ್ರದಲ್ಲಿ ಮನೆ ಮಾಡಿಕೊಂಡಿದ್ದ ಅರಾಫತ್​

- ಈತನಿಂದ್ಲೇ ಬಹುತೇಕ PFI ಕಚೇರಿ ಕೆಲಸಗಳ ನಿರ್ವಹಣೆ

5 ಮಹಮ್ಮದ್ ಶಕೀಬ್

- ಮೂಲತಃ ತಮಿಳುನಾಡಿನ ಮಹಮ್ಮದ್ ಶಾಕಿಬ್

- ರಿಚ್ಮಂಡ್​ ಟೌನ್​ನ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದ

- ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದ ಶಾಕಿಬ್​

6 ಶಾಹಿದ್ ನಸೀರ್​

- ಬೆಂಗಳೂರು ಮೂಲದ ಶಾಹಿದ್​ ನಸೀರ್

- ಸ್ಟೇಟ್​ ಸೋಷಿಯಲ್ ಮೀಡಿಯಾ ಇನ್​ಚಾರ್ಜ್

- ಪಿಎಫ್​​ಐನಲ್ಲಿ ಸಕ್ರಿಯ ಸದಸ್ಯನಾಗಿದ್ದ ಶಾಹಿದ್​ ನಸೀರ್​

ನಿನ್ನೆ ರೇಡ್ ವೇಳೆ ಕಲ್ಬುರ್ಗಿಯ ಪಿಎಫ್ ಐ ಮುಖಂಡ ಶೇಖ್ ಇಲಿಯಾಜ್ ಅಲಿ ಮನೆಯಲ್ಲಿ 14.3 ಲಕ್ಷ ನಗದು ಹಾಗು ಶಿವಮೊಗ್ಗದಲ್ಲಿ ಸೆರೆ ಸಿಕ್ಕ ಶಾಹಿದ್ ಮನೆಯಲ್ಲಿ 19 ಲಕ್ಷ ನಗದು ಪತ್ತೆಯಾಗಿದೆ.ಇದೀಗ ವಿಚಾರಣೆ ವೇಳೆ ನಗದಿನ ಮೂಲ, ಹಣಕಾಸಿನ ವ್ಯವಹಾರ ಎಲೆಕ್ಟ್ರಾನಿಕ್ ಡಿವೈಸ್ ಗಳ ಡಿ ಕೋಡಿಂಗ್ ಮಾಡುವಲ್ಲಿ ಪೊಲೀಸ್ರು ನಿರತರಾಗಿದ್ದಾರೆ.

ಅಚ್ಚರಿ ವಿಚಾರ ಅಂದ್ರೆ ನಿನ್ನೆಯ ರೇಡ್ ವೇಳೆ ಪಿಎಫ್ ಐ ಮುಖಂಡನೊಬ್ಬನ ಮನೆಯಲ್ಲಿ ಸಾವರ್ಕರ್ ರಿಲೇಟೆಡ್ ಪುಸ್ತಕ ಸಹ ಸಿಕ್ಕಿದೆ. ಸದ್ಯ ಈ ಪುಸ್ತಕ, ಧರ್ಮ ಸಂಬಂಧಿ ಪುಸ್ತಕಗಳು ಮೊಬೈಲ್ ಗಳು, ಬ್ಯಾಂಕ್ ಪಾಸ್ ಬುಕ್ ಗಳು ಹೀಗೆ ಎಲ್ಲವುಗಳನ್ನ ಸೂಕ್ಷ್ಮವಾಗಿ ಪರಿಶೀಲನೆ ನಡೆಸಲಾಗ್ತಿದೆ.

Edited By : Manjunath H D
PublicNext

PublicNext

23/09/2022 09:45 pm

Cinque Terre

37.29 K

Cinque Terre

4