ನೆಲಮಂಗಲ: ಲಾರಿ ಟ್ರಾನ್ಸ್ ಪೋರ್ಟ್, ಹೆದ್ದಾರಿ ಡಾಬಾಗಳ ಬಳಿ ಗಾಂಜಾ ಮಾರಾಟ ಮಾಡ್ತಿದ್ದ ಓರ್ವ ಗಾಂಜಾ ಪೆಡ್ಲರ್ ನನ್ನು ದಾಬಸ್ಪೇಟೆ ಪೊಲೀಸರು ಬಂಧಿಸಿದ್ದಾರೆ.
ಇನ್ನೂ ನೆಲಮಂಗಲ ತಾಲ್ಲೂಕು ಸಿದ್ಧರಬೆಟ್ಟ ರಸ್ತೆಯ ಹೊಸ ನಿಜಗಲ್ ಬಳಿ ಬೆಂಗಳೂರು ಉತ್ತರ ತಾಲ್ಲೂಕಿನ ಮಾದಾವರದ ಹರ್ಷಿತ್ ಗೌಡ 24 ವರ್ಷ ಎಂಬ ಗಾಂಜಾ ಪೆಡ್ಲರ್ ನನ್ನು ಬಂಧಿಸಿದ್ದಾರೆ. ಆರೋಪಿಯಿಂದ ಸುಮಾರು 780 ಗ್ರಾಂನಷ್ಟು ಗಾಂಜಾ ಮಾಲು ಜಪ್ತಿ ಮಾಡಿದ್ದು, ಮೈಸೂರಿನಿಂದ ಗಾಂಜಾ ಮಾಲು ರಫ್ತು ಮಾಡಿಕೊಂಡು ಮಾರಾಟ ಮಾಡುತ್ತಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಬಂಧಿತ ಹರ್ಷಿತ್ ದಾಸನಪುರ ಎಪಿಎಂಸಿ ಯಾರ್ಡ್ ನಲ್ಲಿ ಕೆಲಸ ಮಾಡಿಕೊಂಡಿದ್ದ, ಅಲ್ಲದೆ ರಾಬರಿ, ಬೈಕ್ ಕಳ್ಳತನ ಪ್ರಕರಣದ ಆರೋಪಿ ಎಂಬುದಾಗಿ ತನಿಖೆ ವೇಳೆ ಪೊಲೀಸರಿಗೆ ತಿಳಿದು ಬಂದಿದ್ದು,ಆರೋಪಿ ವಿರುದ್ಧ ಎನ್ ಡಿಪಿಎಸ್ ಆಕ್ಟ್ ಪ್ರಕರಣ ದಾಖಲಿಸಿದ ದಾಬಸ್ ಪೇಟೆ ಪೊಲೀಸ್ರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
PublicNext
23/09/2022 05:19 pm