ಬೆಂಗಳೂರು: ತಡರಾತ್ರಿ ಊಟ ಹೋಟೆಲ್‌ನಲ್ಲಿ ಊಟ ಮುಗಿಸಿ ಮನೆಗೆ ಹೋಗುತ್ತಿದ್ದ ಯುವಕನನ್ನ ಪುಂಡರ ಗುಂಪು ಹಲ್ಲೆಗೈದಿದೆ. ಬಾಟಲಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಗ್ಯಾಂಗ್ ಸ್ಥಳದಿಂದ ಪರಾರಿಯಾಗಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಆಜಾದ್ ನಗರದಲ್ಲಿ ನಡೆದಿದೆ.
ಅವಿನಾಶ್ ಹಲ್ಲೆಗೊಳಗಾಗಿದ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಾಲ್ಮೀಕಿ ನಗರ ನಿವಾಸಿಯಾಗಿರುವ ಅವಿನಾಶ್ ನಿನ್ನೆ ತಡರಾತ್ರಿ ಸ್ನೇಹಿತರೊಂದಿಗೆ ಕಲಾಸಿಪಾಳ್ಯಕ್ಕೆ ಊಟಕ್ಕೆ ಹೋಗಿ ವಾಪಸ್ ಮರಳುತ್ತಿದ್ರು. ಈ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಮೂರು-ನಾಲ್ಕು ಬೈಕ್‌ಗಳಲ್ಲಿ ಮಾಸ್ಕ್ ಹಾಗೂ ಹೆಲ್ಮೆಟ್ ಧರಿಸಿ ಹಲ್ಲೆ ಮಾಡಲು ಮುಂದಾಗಿದ್ದಾರೆ. ಗಾಬರಿಯಿಂದ ಅವಿನಾಶ್ ಸ್ನೇಹಿತರು ಕಾಲ್ಕಿತ್ತಿದ್ದಾರೆ. ಆದರೆ ಅವಿನಾಶ್ ಆರೋಪಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಕೂಡಲೇ ಬಾಟಲಿಯಿಂದ ಮುಖ ಹಾಗೂ ಕೈಗಳ ಮೇಲೆ ಚುಚ್ಚಿ ಗಾಯಗೊಳಿಸಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಅವಿನಾಶ್ ಕೈ ಬೆರಳುಗಳು ಕಟ್ ಆಗಿದೆ. ಆಸ್ತಿ ವಿಚಾರಕ್ಕಾಗಿ ಹಲ್ಲೆಯಾಗಿರಬಹುದು ಎಂದು ಹೇಳಲಾಗುತ್ತಿದೆ. ಸದ್ಯ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
PublicNext
22/09/2022 03:29 pm