ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಎರಡೇ ಪತ್ನಿ ಕೊಲೆಗೆ ಸಂಚು ರೂಪಿಸಿ ಸಿಸಿಬಿ ಕೈಗೆ ಲಾಕ್ ಆದ ಪತಿ

ಬೆಂಗಳೂರು: ಆತ ಒಂದಲ್ಲ ಎರಡು ಮದುವೆಯಾಗಿದ್ದ. 2ನೇ ಹೆಂಡತಿ ಕಾಟ ಕೊಡ್ತಿದ್ಲು ಅಂತ ಆಕೆಯನ್ನ ಮುಗಿಸೋಕೆ ಜೈಲಿನಲ್ಲಿದ್ದ ರೌಡಿಗೆ ಸುಪಾರಿ ಕೊಟ್ಟಿದ್ದ ಆ ಕಿರಾತಕ ಗಂಡ.

ಅಷ್ಟೇಅಲ್ಲ ಕೊಲೆಗೂ ಮುನ್ನ ಮಡದಿಯನ್ನ ಕಿಡ್ಯ್ನಾಪ್ ಮಾಡೋಕು ಖತರ್ನಾಕ್ ಪ್ಲಾನ್ ಮಾಡಿದ್ದ. ಆದ್ರೆ, ಈ ಪ್ಲಾನ್ ಕಾರ್ಯರೂಪಕ್ಕೆ ಬರೋ ಮೊದ್ಲೆ ಸಿಸಿಬಿ ಪೊಲೀಸ್ರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಈ ಫೋಟೋದಲ್ಲಿ ಈ ವ್ಯಕ್ತಿಯ ಹೆಸರು ಸಿದ್ಧಾರ್ಥ್. ಮನಸ್ಸಿಗೆ ಬಂದ ಕೆಲಸ ಮಾಡಿಕೊಂಡು ಜೀವನ ಮಾಡ್ತಿದ್ದ ಈತ ಒಂದಲ್ಲ ಎರಡು ಮದುವೆಯಾಗಿದ್ದಾನೆ. 2ನೇ ಹೆಂಡತಿ ಶಾಲಿನಿ ಜೊತೆ ಮದುವೆಯಾಗಿ ಒಂದು ಮಗುವಾಗುವವರೆಗೂ ಎಲ್ಲ ಚೆನ್ನಾಗೇ ಇತ್ತು. ಅಲ್ಲಿವರೆಗೆ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಡ್ತಿದ್ದ ಈ ದಂಪತಿ ನಂತರದಲ್ಲಿ ದೂರಾಗಲು ದೊಡ್ಡ ಕಾರಣವಾಗಿತ್ತು.

ಈ ನಡುವೆ ಶಾಲಿನಿ ಪತಿ ಸಿದ್ಧಾರ್ಥ್, ಆತನ ಮೊದಲ ಹೆಂಡತಿ ಹಾಗೂ ಕುಟುಂಬದವರ ವಿರುದ್ಧ ತನ್ನ ಮಗುವನ್ನ ಕಿಡ್ಯ್ನಾಪ್ ಮಾಡಿದ ಆರೋಪದ ಮೇಲೆ ದೂರು ದಾಖಲಿಸಿದ್ದಾಳೆ. ಈ ಪ್ರಕರಣದಲ್ಲಿ ಸಿದ್ಧಾರ್ಥ್ ಕೋರ್ಟ್ ಮೆಟ್ಟಿಲೇರುವಂತಾಯಿತು. ಈ ಕಾರಣಕ್ಕೆ ಸಿಟ್ಟಿಗೆದ್ದ ಸಿದ್ಧಾರ್ಥ್ 2ನೇ ಹೆಂಡತಿ ಶಾಲಿಯನ್ನು ಮುಗಿಸೋಕೆ ನಿರ್ಧರಿಸಿದ್ದ.

ಮಗುವಿನ ಅಪಹರಣ ಪ್ರಕರಣದಲ್ಲಿ ಜೈಲು ಸೇರಿದ ಸಮಯದಲ್ಲಿ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡ್ತಿದ್ದ ಯೋಗೀಶ್ ಹಾಗೂ ಆಂಬ್ಯುಲೆನ್ಸ್ ಡ್ರೈವರ್ ರಂಜಿತ್ ಪರಿಚಯವಾಗಿತ್ತು. ಮೊದಲಿಗೆ ಇವರ ಸಹಾಯದಿಂದ ಶಾಲಿನಿಯನ್ನ ಕಿಡ್ಯ್ನಾಪ್ ಮಾಡುವ ಪ್ಲಾನ್ ಮಾಡಿದ್ದ. ಆದರೆ ಆಂಬ್ಯುಲೆನ್ಸ್ ಚಾಲಕನಿಗೆ ಮಡದಿಯ ಕೊಲೆ ಅಪಹರಣ ಮಾಡುವ ವಿಷಯ ತಿಳಿಸಿರಲಿಲ್ಲ. ಅದಕ್ಕಾಗಿಯೇ ಒಂದು ಕಥೆ ಕಟ್ಟಿದ್ದ. ತನ್ನ ಮಡದಿ ಡ್ರಗ್ ದಾಸಳಾಗಿದ್ದು, ಮಾನಸಿಕವಾಗಿ ಖಿನ್ನತೆಗೊಗಾಗಿದ್ದಾಳೆ.

ಅದಕ್ಕೆ ಅವಳನ್ನು ರಿಹ್ಯಾಬ್ಗೆ ಸೇರಿಬೇಕು. ಅದಕ್ಕೆ ಅವಳು ಒಪ್ಪೋದಿಲ್ಲ. ಬಲವಂತವಾಗಿ ಅವಳನ್ನ ಆಂಬ್ಯುಲೆನ್ಸ್ ನಲ್ಲಿ ಕರೆಕೊಂಡು ಹೋಗಬೇಕು ಎಂದಿದ್ದ. ಇದರ ಜೊತೆಗೆ ಆಸ್ಪತ್ರೆಯಲ್ಲಿ ಅಟೆಂಡರ್ ಆಗಿದ್ದ ಯೋಗೀಶ್ಗೆ ಕೊಲೆಗೆ ಸ್ಕೆಚ್ ಹಾಕಿದ್ದ ಬಗ್ಗೆ ಮಾಹಿತಿ ಕೊಟ್ಟಿದ್ದ. ಆಗ ಯೋಗೀಶ್ ತನ್ನ ಮನೆಯ ಪಕ್ಕದಲ್ಲೇ ಇದ್ದ ಬೆಟ್ಟಪ್ಪ ಅನ್ನೋ ರೌಡಿ ಜೈಲಿನಲ್ಲಿದ್ದು, ಆತನಿಗೆ ಸುಫಾರಿ ಒಪ್ಪಿಸೋಣ ಅಂತ ಐಡಿಯಾ ಕೊಟ್ಟಿದ್ದ. ಅದರಂತೆ ಯೋಗೀಶ್ ಜೈಲಿಗೆ ಹೋಗಿ ಬೆಟ್ಟಪ್ಪನನ್ನ ಮೀಟ್ ಮಾಡಿ ವಿಷಯ ತಿಳಿಸಿದ್ದ. ಇನ್ನೂ ಸುಪಾರಿ ಹಣ ನಿಗದಿಯಾಗಿರಲಿಲ್ಲ. ಅಷ್ಟೋತ್ತಿಗೆ ಸಿಸಿಬಿ ಪೊಲೀಸ್ರಿಗೆ ಈ ಕೊಲೆಯ ಸ್ಕೆಚ್ ಬಗ್ಗೆ ಮಾಹಿತಿ ಸಿಕ್ಕಿತ್ತು.

ಪ್ರಕರಣದ ತನಿಖೆ ಆರಂಭಿಸಿದ ಪೊಲೀಸ್ರು ಶಾಲಿನಿ ಅಪಹರಣ ಹಾಗೂ ಕೊಲೆಗೆ ಮುನ್ನವೇ ಆರೋಪಿಗಳನ್ನ ಬಂಧಿಸಿದ್ದಾರೆ. ಪತಿ ಸಿದ್ಧಾರ್ಥ್, ರಂಜಿತ್ ಹಾಗೂ ಯೋಗೀಶ್ನನ್ನ ಬಂಧಿಸಿ, ನಡೆಯಬೇಕಿದ್ದ ಕೊಲೆಯನ್ನ ತಪ್ಪಿಸಿದ್ದಾರೆ.

Edited By : Manjunath H D
PublicNext

PublicNext

21/09/2022 09:32 pm

Cinque Terre

38.95 K

Cinque Terre

0

ಸಂಬಂಧಿತ ಸುದ್ದಿ