ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗೋಮಾಂಸ ಸಾಗಾಟದ ಆಕ್ಟಿವಾಕ್ಕೆ ಬೆಂಕಿ ಪ್ರಕರಣ; ಸವಾರ ಸಹಿತ ನಾಲ್ವರ ಬಂಧನ

ದೊಡ್ಡಬಳ್ಳಾಪುರ: ಆಕ್ಟಿವಾದಲ್ಲಿ ಗೋಮಾಂಸ ಸಾಗಿಸುತ್ತಿದ್ದಾಗ, ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ವಾಹನದಲ್ಲಿದ್ದ ಗೋಮಾಂಸ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗುತ್ತೆ. ಗೋಮಾಂಸ ಕಂಡ ಸ್ಥಳೀಯರು ದ್ವಿಚಕ್ರ ವಾಹನಕ್ಕೆ ಬೆಂಕಿ ಇಟ್ಟಿದ್ರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಟಿವಾ ಸವಾರ ಹಾಗೂ ಬೆಂಕಿ ಇಟ್ಟ ಮೂವರನ್ನ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಶಿವಾಜಿನಗರದ ಹಿದಾಯತ್ ಉಲ್ಲಾ ಮನೆಯಲ್ಲಿ ಕಾರ್ಯಕ್ರಮ ಇದ್ದು, ಸೆ.16 ರಂದು ಮಾಂಸ ತರಲೆಂದು ಆಕ್ಟಿವಾದಲ್ಲಿ ಹಿಂದೂಪುರಕ್ಕೆ ತೆರಳಿದ್ರು. 80 ಕೆ.ಜಿ. ಗೋಮಾಂಸವನ್ನ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಬೆಂಗಳೂರಿಗೆ ವಾಪಸ್ ಬರುತ್ತಿದ್ದರು.

ಬಾಶೆಟ್ಟಿಹಳ್ಳಿ ಬಳಿಯ ಪೆಟ್ರೋಲ್ ಬಂಕ್ ಬಳಿ ಆಕ್ಟಿವಾದ ನಿಯಂತ್ರಣ ಕಳೆದುಕೊಂಡ ಹಿದಾಯತ್ ಕೆಳಗೆ ಬಿದ್ದಿದ್ದಾರೆ, ಗೋಮಾಂಸ ತುಂಬಿದ ಚೀಲ ಸಹ ಕೆಳಗೆ ಬಿದ್ದು ರಸ್ತೆಯಲ್ಲಿ ಹರಡಿದೆ. ಇದನ್ನ ನೋಡಿದ ಸ್ಥಳೀಯರು ವಾಹನಕ್ಕೆ ಬೆಂಕಿ ಇಟ್ಟಿದ್ದರು.

ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಹಿದಾಯತ್ ಪ್ರಕರಣ ದಾಖಲಿಸಿದ್ದಾರೆ. ಗೋಮಾಂಸ ಸಾಗಾಟಕ್ಕೆ ಹಿದಾಯತ್ ಮತ್ತು ದ್ವಿಚಕ್ರ ವಾಹನಕ್ಕೆ ಬೆಂಕಿ ಇಟ್ಟ ಕಾರಣಕ್ಕೆ ಮೂವರನ್ನ ಬಂಧಿಸಿರುವುದ್ದಾಗಿ ಪೊಲೀಸರು ತಿಳಿಸಿದ್ದಾರೆ.

Edited By : Nagesh Gaonkar
PublicNext

PublicNext

19/09/2022 05:38 pm

Cinque Terre

27.33 K

Cinque Terre

1

ಸಂಬಂಧಿತ ಸುದ್ದಿ