ಬೆಂಗಳೂರು: ಬೆಂಗಳೂರಿನ ಯಲಹಂಕದ ಕೋಗಿಲು ಸರ್ಕಲ್ ಬಳಿಯ ಕೂರ್ಲಪ್ಪ ಕಾಂಪ್ಲೆಕ್ಸ್ ಬಳಿ ದುಷ್ಕರ್ಮಿಗಳು ಬೈಕ್ ಓವರ್ ಟೇಕ್ ಮಾಡಲು ಜಾಗ ಕೊಟ್ಟಿಲ್ಲ ಎಂದು ಟಾಟಾ ಏಸ್ ಚಾಲಕನ ಮೇಲೆ ಡ್ರಾಗರ್ ನಿಂದ ಕೊಲೆಗೆ ಯತ್ನಸಿದ್ದಾರೆ. ಮೂರು ಜನ ಚಿಗುರುಮೀಸೆಯ ಕಿಡಿಗೇಡಿಗಳು ಕ್ಷಣಾರ್ಧದಲ್ಲಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಪ್ರಕಾಶ್ ಎಂಬ ಚಾಲಕ (21) ದಾಳಿಯಿಂದ ಬಚಾವಾಗಿದ್ದು, ಯಲಹಂಕ ಪೊಲೀಸ್ ಠಾಣೆಲಿ ಎಫ್ಐಆರ್ ದಾಖಲಿಸಿದ್ದಾನೆ.
ಫರ್ನಿಚರ್ಸ್ ಸಪ್ಲೆ ಮಾಡಲು ನೆಲಮಂಗಲ ರಸ್ತೆಯಿಂದ ಟಾಟಾ ಏಸ್‌ನಲ್ಲಿ ಪ್ರಕಾಶ್ ಮತ್ತೊಬ್ಬ ಯುವಕರು ಯಲಹಂಕಕ್ಕೆ ಬಂದಿದ್ದರು. ವಾಪಸ್ ಹೋಗ್ತಿದ್ದ ವೇಳೆ ಕೋಗಿಲು ಮುಖ್ಯರಸ್ತೆ ಕೂರ್ಲಪ್ಪ ಕಾಲ ಪ್ಲೆ ಕರಣ್ ಬಳಿ ವೆಹಿಕಲ್ ಓವರ್ ಟೇಕ್ ಮಾಡಲು ಅವಕಾಶ ಕೊಟ್ಟಿಲ್ಲ ಎಂದು ಮೂರು ಜನ ಸ್ಥಳೀಯರು ದಾಳಿ ನಡೆಸಿದ್ದಾರೆ. ಟಾಟಾ ಏಸ್ ಚಾಲಕ ಪ್ರಕಾಶ್‌ನನ್ನ ಅವಾಚ್ಯವಾಗಿ ನಿಂದಿಸಿದ್ದಾರೆ. ನಂತರ ಮಾತಿನ ಚಕಮಕಿ ನಡೆದು ಪ್ರಕಾಶ್ ಮೇಲೆ ವಿನಯ್, ಸಂಜಯ್ ಮತ್ತು ತಾಹೀರ್ ಎಂಬ ಮೂರು ಜನ ಡ್ರಾಗರ್‌ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಪ್ರಕಾಶ್‌ಗೆ ಅಷ್ಟು ಮೂರು ಸಲ ಡ್ರಾಗರ್ ಬೀಸಿದಾಗ ಎಸ್ಕೇಪ್ ಆಗಿದ್ದಾನೆ. ಹಲ್ಲೆ ವೇಳೆ ಪ್ರಕಾಶ್ ಕೈ, ಕಾಲು, ಕತ್ತು, ತೊಡೆ, ಮೈಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಸ್ಥಳಕ್ಕಾಗಮಿಸಿದ ಯಲಹಂಕ ಪೊಲೀಸರು ಮಾಹಿತಿ ಆಧಾರದ ಮೇರೆಗೆ ಸಂಜಯ್ ಎಂಬ ಹುಡುಗನನ್ನು ವಶಕ್ಕೆ ಪಡೆದಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ವಿನಯ್ ಮತ್ತು ತಾಹಿರ್‌ಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ..
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ..
PublicNext
15/09/2022 10:21 pm