ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ಹೆಚ್ಚಾಗ್ತಿರೋ ಮೊಬೈಲ್ ಸ್ನ್ಯಾಚಿಂಗ್ ಮೇಲೆ ಕಣ್ಣಿಟ್ಟಿರೋ
ಸಿಸಿಬಿ ಪೊಲೀಸ್ರು ಇವತ್ತು ದೊಡ್ಡದೊಂದು ಮೊಬೈಲ್ ಗ್ಯಾಂಗನ್ನೇ ಖೆಡ್ಡಾಕ್ಕೆ ಕೆಡವಿದ್ದಾರೆ.
ಕಾಟನ್ ಪೇಟೆ, ಬೇಗೂರು, ಬೆಳ್ಳಂದೂರು, ಮಹದೇವಪುರ ಹೀಗೆ ಹತ್ತಾರು ಪೊಲೀಸ್ ಠಾಣೆಗಳಿಗೆ ಬೇಕಾಗಿದ್ದ ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ. ಅಬ್ದುಲ್ ರಹೀಂ, ನೂರ್ ಹುಸೇನ್, ಅಫ್ಜಲ್ ಹುಸೇನ್, ಅಬ್ದುಲ್ @ ಮಣಿ, ಜಮಾಲುದ್ದೀನ್, ದಿಲೀಪ್ ಕುಮಾರ್ ಬಂಧಿತ ಖದೀಮರು.
ಬಂಧಿತರಿಂದ 50 ಲಕ್ಷ ಮೌಲ್ಯದ 619 ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಚೋರರು ದಾರಿಹೋಕರನ್ನು ಬೆದರಿಸಿ ಮೊಬೈಲ್ ಗಳನ್ನು ಸುಲಿಗೆ ಮಾಡಿ ಬಳಿಕ ಸಿಕ್ಕಸಿಕ್ಕವರಿಗೆ ಅತಿ ಕಡಿಮೆ ಬೆಲೆಗೆ ಮಾರುತ್ತಿದ್ದರು.
PublicNext
14/09/2022 08:00 pm