ಬೆಂಗಳೂರು: ರಾಜಕಾಲುವೆಗಳ ಮೇಲೆ ಒತ್ತುವರಿ ಮಾಡಿ ಮನೆಗಳನ್ನು ಕಟ್ಟಿದ ಮಾಲೀಕರಿಗೆ ಈಗ ಬಿಬಿಎಂಪಿ ಶಾಕ್ ಕೊಟ್ಟಿದೆ. ಹೌದು ಇಂದು ಮಹದೇವಪುರ ವಲಯದಲ್ಲಿ ಬೆಳಗ್ಗೆ ಜೆಸಿಬಿಗಳ ಘರ್ಜನೆ ಶುರುವಾಗಿತ್ತು. ಇಂದು ಬೆಳಗ್ಗೆ ಫೀಲ್ಡಿಗಿಳಿದ ಕಂದಾಯ ಇಲಾಖೆ ಅಧಿಕಾರಿಗಳು ರಾಜಕಾಲುವೆಯನ್ನು ಒತ್ತುವರಿ ಮಾಡಿ ಕಟ್ಟಿದ ಮನೆಗಳಿಗೆ ಜೆಸಿಬಿ ನುಗ್ಗಿಸಿ ಮನೆಗಳನ್ನು ಧರೆಗೆ ಉರುಳಿಸಿದ್ರು. ಹೌದು ಇಂದು ಕಂದಾಯ ಇಲಾಖೆಯ ಅಧಿಕಾರಿಗಳು ಮಹದೇವಪುರ ವಲಯದಲ್ಲಿ ಮಾರ್ಕಿಂಗ್ ಮಾಡಿ ಅಕ್ರಮವಾಗಿ ರಾಜಕಾಲುವೆಗಳ ಮೇಲೆ ಕಟ್ಟಿದ್ದ ಮನೆ ತೆರವು ಮಾಡುವ ಕಾರ್ಯ ಆರಂಭಿಸಿದ್ದಾರೆ ಮತ್ತು ಹಲವಾರು ಮನೆಗಳಿಗೆ ನೋಟಿಸ್ ನೀಡಿ ಏಳು ದಿನಗಳಲ್ಲಿ ಖಾಲಿ ಮಾಡಲು ವಾರ್ನಿಂಗ್ ಕೊಟ್ಟಿದ್ದಾರೆ.
ಚಿನ್ನಪ್ಪನಹಳ್ಳಿ ಕೆರೆಯಿಂದ ಮುನೇನಕೊಳಲು ತನಕ ತೆರವು ಕಾರ್ಯಚರಣೆ ನಡೆಯುತ್ತಿದೆ. ಸ್ಪೈಸ್ ಗಾರ್ಡನ್ ಬಳಿ 20 ಬಿಲ್ಡಿಂಗ್ ಗಳು ರಾಜಕಾಲುವೆಯನ್ನು ಒತ್ತುವರಿ ಮಾಡಿ ಅಕ್ರಮವಾಗಿ ಮನೆಗಳನ್ನು ಕಟ್ಟಿದ್ದರು. ಈಗ ಕಂದಾಯ ಇಲಾಖೆಯ ಅಧಿಕಾರಿಗಳು 20 ಬಿಲ್ಡಿಂಗ್ ಗಳ ತೆರವು ಕಾರ್ಯಾಚರಣೆ ಆರಂಭಿಸಿದರು. ಚಿನ್ನಪ್ಪನಹಳ್ಳಿಯಲ್ಲಿ 5 ಕಟ್ಟಡಗಳು ರಾಜಕಾಲುವೆ ಒತ್ತುವರಿ ಮಾಡಿದ್ದು ಕಟ್ಟಡಗಳಿಗೆ ಇಂದು ಜೆಸಿಬಿ ನುಗ್ಗಿಸಲಾಗಿದೆ. ಮನೆ ತೆರವು ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಮನೆಯ ಒಳಗೆ ಕುಳಿತ ಮನೆ ಮಾಲೀಕರನ್ನು ಪೊಲೀಸರು ಹೊರಗೆ ಎಳೆದುಕೊಂಡು ಬಂದ್ರು. ವರ್ಷಗಟ್ಟಲೆ ಟ್ಯಾಕ್ಸ್ ಕಟ್ಟಿಸಿ ಕೊಂಡಾಗ ಬಿಬಿಎಂಪಿಗೆ ಇದು ಅಕ್ರಮ ಕಟ್ಟಡವೆಂದು ಗೊತ್ತಿರಲಿಲ್ವಾ ಎಂದು ಅಧಿಕಾರಿಗಳ ಮೇಲೆ ಮನೆ ಮಾಲೀಕರು ಗರಂ ಆದ್ರು.
ಒಟ್ಟಿನಲ್ಲಿ ಏಳು ದಿನಗಳ ಡೆಡ್ ಲೈನ್ ನೀಡಿ ಹೋಗಿರುವ ಅಧಿಕಾರಿಗಳು ಏಳು ದಿನಗಳ ನಂತರ ಏನು ಮಾಡುತ್ತಾರೆ ಎಂದು ನೋಡಬೇಕು ಮತ್ತು ಮನೆ ಮಾಲೀಕರು ಕೋರ್ಟ್ ಮೆಟ್ಟಿಲು ಏರುವ ಸಾಧ್ಯತೆಗಳು ಇದೆ.
-ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
12/09/2022 07:08 pm