", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/418299-1736600537-AROPA.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಆಕೆಗೆ ಮದುವೆ ಆಗಿ ಇಬ್ಬರು ಮಕ್ಕಳಿದ್ರು. ಈತನಿಗೆ ಪ್ರಿಯತಮೆ ಬೇಕಾಗಿತ್ತು. ಹಲವು ದಿನಗಳಿಂದ ಇಬ್ಬರು ಕದ್ದು ಮುಚ್ಚಿ ಪ್ರೀತಿ ಮಾಡ್ತಿ...Read more" } ", "keywords": "Bengaluru Suicide Case, Lover Commits Suicide, Heartbreak, Suicide News, Bengaluru Crime, Karnataka News, Love Story Turns Tragic, Suicide Due To Rejection, Bengaluru Police.,Bangalore,Bangalore-Rural,Crime,Law-and-Order", "url": "https://publicnext.com/article/nid/Bangalore/Bangalore-Rural/Crime/Law-and-Order" } ಬೆಂಗಳೂರು: ಪ್ರಿಯತಮ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ತಾನೂ ನೇಣಿಗೆ ಶರಣಾದ ಪ್ರೇಮಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪ್ರಿಯತಮ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ತಾನೂ ನೇಣಿಗೆ ಶರಣಾದ ಪ್ರೇಮಿ

ಬೆಂಗಳೂರು: ಆಕೆಗೆ ಮದುವೆ ಆಗಿ ಇಬ್ಬರು ಮಕ್ಕಳಿದ್ರು. ಈತನಿಗೆ ಪ್ರಿಯತಮೆ ಬೇಕಾಗಿತ್ತು. ಹಲವು ದಿನಗಳಿಂದ ಇಬ್ಬರು ಕದ್ದು ಮುಚ್ಚಿ ಪ್ರೀತಿ ಮಾಡ್ತಿದ್ರು. ಹೀಗಿದ್ದವರ ಮಧ್ಯೆ ಅದೇನಾಯ್ತೋ ಏನೋ, ಇಬ್ಬರು ಒಂದೇ ದಿನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ!

ಈ ಫೋಟೊದಲ್ಲಿ ಕಾಣ್ತಿರುವ ಚೆಲುವೆ ಹೆಸರು ದಿಲ್ ಶಾದ್ ಅಂತಾ. ಆಂಧ್ರದ ಹಿಂದೂಪುರ ಮೂಲದ ದಿಲ್ ಶಾದ್ ಆರು ವರ್ಷದ ಹಿಂದೆ ಕೃಷ್ಣ ಎಂಬಾತನನ್ನ ಪ್ರೀತಿಸಿ ವಿವಾಹವಾಗಿದ್ಳು. ದಂಪತಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಇನ್ನು, ಈತನ ಹೆಸರು ಜಾನ್ಸನ್ ಸೆಂಟ್ರಿಂಗ್ ಕೆಲಸದ ಜೊತೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಆದ್ರೆ ಇಬ್ಬರಿಗೆ ಅದ್ಹೇಗೆ ಪರಿಚಯ ಬೆಳಿತೋ ಗೊತ್ತಿಲ್ಲ. ಈಗ ಒಂದೇ ದಿನ ಇಬ್ಬರು ಸಾವಿನ ಮನೆ ಸೇರಿದ್ದಾರೆ.

ಇವ್ರಿಬ್ಬರ ಪ್ರೀತಿ ಮಧ್ಯೆ ಅದೇನಾಯ್ತೋ ಏನೋ ಗೊತ್ತಿಲ್ಲ. ನಿನ್ನೆ ಸಂಜೆ 6.30ಕ್ಕೆ ಸರಿಯಾಗಿ ಜಾನ್ಸನ್ ಥಣಿಸಂದ್ರದಲ್ಲಿರುವ ಮನೆಗೆ ಬಂದು ತನ್ನ ಕೊಠಡಿ ಸೇರಿದ್ದ. ಜಾನ್ಸನ್ ಎಷ್ಟೊತ್ತಾದರೂ ಹೊರಗೆ ಬರಲೇ ಇಲ್ಲ. ಕುಟುಂಬಸ್ಥರು ಕೂಡ ಸುಸ್ತಾಗಿ ಮಲಗಿರ್ಬೋದು ಅಂತಾ ಸುಮ್ಮನಿದ್ರು. ಎಷ್ಟೊತ್ತಾದ್ರು ಬರದೇ ಇದ್ದಾಗ ಮಧ್ಯರಾತ್ರಿ 2 ಗಂಟೆಗೆ ತಂದೆ ಆನಂದ್ ಎದ್ದು ಬಾಗಿಲು ಬಡಿದಿದ್ದಾರೆ. ಮೂರು ಬಾರಿ ಕರೆ ಮಾಡಿದ್ದು ಕರೆ ಸ್ವೀಕರಿಸಿರಲಿಲ್ಲ.

ಆಗಿದ್ದಾಯ್ತು ನಿದ್ದೆಯಲ್ಲಿರಬಹುದು ಅಂತಾ ಸುಮ್ಮನಾಗಿದ್ದಾರೆ. ಬೆಳಗ್ಗೆ 6.30 ಆದರೂ ಎದ್ದು ಬರದಿದ್ದಾಗ ಅನುಮಾನ‌ ಬಂದಿದ್ದು ಹತ್ತಿರದಲ್ಲೇ‌ ಇದ್ದ ಅಳಿಯ ಹಾಗೂ ಜಾನ್ಸನ್ ಸ್ನೇಹಿತರನ್ನು ಕರೆದು ರೂಮಿನ ಬಾಗಿಲು ಒಡೆದು ನೋಡಿದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದು ಗೊತ್ತಾಗಿದೆ. ಸ್ಥಳಕ್ಕೆ ಬಂದ ಹೆಣ್ಣೂರು ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಇನ್ನು, ಜಾನ್ಸನ್ ಸ್ನೇಹಿತರು ಸಾವಿನ ಸುದ್ದಿಯನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ರು. ಅದನ್ನ ನೋಡಿ ಶಾಕ್ ಗೆ ಒಳಗಾಗಿದ್ದ ದಿಲ್ ಶಾದ್ , ಮನೆ ಬಳಿ ಬಂದು ನೋಡಿಕೊಂಡು ಹೋಗಿದ್ದಾಳೆ. ಸಾವು ಖಚಿತ ಆದ‌ ಮೇಲೆ ತಾನು ಬದುಕಬಾರದು ಅನ್ನೋ ನಿರ್ಧಾರಕ್ಕೆ ಬಂದಿದ್ಳು. ಬೆಳಗ್ಗೆ ತಮ್ಮ ಮನೆಯಲ್ಲಿಯೇ ಸೀರೆಯಿಂದ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ. ಮಾಹಿತಿ ಗೊತ್ತಾಗ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ್ದ ಸಂಪಿಗೆಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆದ್ರೆ ದಿಲ್ ಶಾದ್ ಕುಟುಂಬಸ್ಥರು, ಗಂಡ ಕೃಷ್ಣ ಯಾವಾಗಲೂ ಅನುಮಾನ ಪಡ್ತಿದ್ದ. ಜೊತೆಗೆ ಕುಡಿದು ಬಂದು ಹಲ್ಲೆ ಮಾಡ್ತಿದ್ದ. ಇದೇ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದಾಳೆಂದು ಗಂಡನ ಮೇಲೆಯೇ ಆರೋಪ ಹೊರಿಸಿದ್ದಾರೆ. ಅಲ್ಲದೇ ಸಾವಿನ ಸುದ್ದಿ ತಿಳಿದು ಸಂಬಂಧಿಕರು ಕಣ್ಣೀರು ಹಾಕಿದ್ರು.

ದಿಲ್ ಶಾದ್ ಸಾವಿಗೆ ಸಂಬಂಧಪಟ್ಟಂತೆ ಸಂಪಿಗೆಹಳ್ಳಿ ಪೊಲೀಸರು, ಜಾನ್ಸನ್ ಸಾವಿಗೆ ಸಂಬಂಧ ಪಟ್ಟಂತೆ ಹೆಣ್ಣೂರು ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. ತನಿಖೆ ಬಳಿಕ ಸಾವಿಗೆ ಅಸಲಿ ಕಾರಣ ಏನು ಅನ್ನೋದು ಗೊತ್ತಾಗಲಿದೆ. ಅದೇನೇ ಇರಲಿ. ಸುಂದರ ಸಂಸಾರವಿತ್ತು. ಇದನ್ನು ಸರಿಯಾಗಿ ನೋಡಿಕೊಂಡು ಹೋದ್ರೆ ಆಗ್ತಿತ್ತು. ಆದರೆ, ಯುವಕನ ಹುಚ್ಚಿಗೆ ಬಿದ್ದ

ದಿಲ್ ಶಾದ್ ಸಾವಿನಿಂದ 5 ಹಾಗೂ 3 ವರ್ಷದ ಮಕ್ಕಳು ತಾಯಿ ಇಲ್ಲದ ತಬ್ಬಲಿಗಳಾಗಿರೋದು ದುರಂತ.

Edited By : Ashok M
PublicNext

PublicNext

11/01/2025 06:32 pm

Cinque Terre

40.43 K

Cinque Terre

0

ಸಂಬಂಧಿತ ಸುದ್ದಿ