ಬೆಂಗಳೂರು: ರಾಮನಗರ ಜಿಲ್ಲೆಯ ಕುದೂರು ಪೊಲೀಸರ ಮೇಲೆ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಕಳ್ಳತನದ ಮಾಲು ರಿಕವರಿ ಹೆಸರಲ್ಲಿ ಚಿನ್ನದ ಸರ ತೆಗೆದುಕೊಂಡು ಹೋಗಿದ್ದಾರೆಂದು ಕುದೂರು ಠಾಣೆ ಪೊಲೀಸರ ವಿರುದ್ದ ಐಜಿಪಿ ಅಲೋಕ್ ಮೋಹನ್‌ಗೆ ಹೆಬ್ಬಗೋಡಿಯ ಮೋನಿಕ್ ಜ್ಯುವೆಲರ್ಸ್ ಮಾಲೀಕ ಚೇತನ್ ಎಂಬುವವರು ದೂರು ಸಲ್ಲಿಸಿದ್ದಾರೆ.
ಕಳ್ಳತನದ ಕೇಸ್‌ವೊಂದರ ತನಿಖೆ ನಡೆಸುತ್ತಿದ್ದ ಕುದೂರು ಪೊಲೀಸರು ಕಳ್ಳನನ್ನು ಬಂಧಿಸಿ ಆತನಿಂದ ಚಿನ್ನಾಭರಣ ರಿಕವರಿಗೆ ಮುಂದಾಗಿದ್ದರು.
ಕಳೆದ ತಿಂಗಳು 11ರಂದು ಹಿಂದೆ ಆ ಕಳ್ಳ ಹೆಬ್ಬಗೋಡಿಯ ಮೋನಿಕಾ ಜ್ಯುವೆಲರ್ಸ್‌ಗೆ ಬಂದು ಬೆಳ್ಳಿಯ ಕೈ ಚೈನ್ ತೋರಿಸಿ ಹೊಸ ಚೈನ್ ಮಾಡಿಸಬೇಕು ಎಂದಿದ್ದ. ಈ ವೇಳೆ ಹೊಸ ಚೈನ್ ಮಾಡಿಸಲು 25 ಸಾವಿರ ಆಗುತ್ತೆಂದು ಅಂಗಡಿ ಮಾಲೀಕರು ಹೇಳಿದ್ರು.
ಈ ವೇಳೆ ಹಲವು ಚೈನ್ ನೋಡಿ ಹಣವಿಲ್ಲದೇ ಕಳ್ಳ ವಾಪಸ್ ಆಗಿದ್ದ. ಕಳ್ಳ ಹೋದ ನಂತರ ಡಿಸೆಂಬರ್ 24 ರಂದು
ಕುದೂರು ಇನ್ಸ್ಪೆಕ್ಟರ್ ನವೀನ್ ಹಾಗೂ ತಂಡ ಜ್ಯುವೆಲ್ಲರಿ ಶಾಪ್‌ಗೆ ಎಂಟ್ರಿ ಕೊಟ್ಟಿತ್ತು. ಕಳ್ಳನನ್ನು ರಿಕವರಿಗೆ ಅಂತಾ ಕರೆದುಕೊಂಡು ಬಂದಿದ್ದ ಇನ್ಸ್ಪೆಕ್ಟರ್ ನವೀನ್, ಈತ ನಿಮ್ಮ ಅಂಗಡಿಯಲ್ಲಿ ಕಳ್ಳತನದ ಮಾಲು ಗಿರವಿ ಇಟ್ಟಿದ್ದಾನೆ ಎಂದಿದ್ದರು.
ಆದರೆ ಶಾಪ್ ಮಾಲೀಕ ಚೇತನ್ ಇಲ್ಲಾ ಎಂದು ವಾದಿಸಿ, ಬೇಕಾದ್ರೆ ಸಿಸಿಟಿವಿ ಚೆಕ್ ಮಾಡಿ ಎಂದು ಹೇಳಿದ್ದರು. ಆದರೆ ರಿಕವರಿ ಹೆಸರಲ್ಲಿ 31.5 ಗ್ರಾಂ ತೂಕದ 2 ಚಿನ್ನದ ಸರಗಳನ್ನು ಪೊಲೀಸರು ತೆಗೆದುಕೊಂಡು ಹೋಗಿದ್ದಾರೆ ಅಂತಾ ಡಿಜಿ ಅಲೋಕ್ ಮೋಹನ್‌ಗೆ ಚೇತನ್ ದೂರು ನೀಡಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಈ ವಿಚಾರವಾಗಿ ಪಬ್ಲಿಕ್ ನೆಕ್ಸ್ಟ್ ಗೆ ಮಾಹಿತಿ ನೀಡಿದ್ದು, ಕಾನೂನು ಬದ್ದವಾಗಿ ರಿಕವರಿ ಮಾಡಲಾಗಿದೆ. ಆರೋಪಿ ಆ ಜ್ಯುವೆಲರಿ ಶಾಪ್‌ನಲ್ಲಿ ಚಿನ್ನ ಇಟ್ಟಿರೋದಕ್ಕೆ ದಾಖಲಗಳಿವೆ ಎಂದು ತಿಳಿಸಿದ್ದಾರೆ.
PublicNext
11/01/2025 04:02 pm