ಬೆಂಗಳೂರು: ಕೇರಳ ಮೂಲದ ಯುವಕ ಆತ್ಮಹತ್ಯೆ ಯತ್ನಕ್ಕೆ ಕಾರಣ ಏನೂ ಅನ್ನೋದು ರಿವೀಲ್ ಆಗಿದೆ. ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನ ಹೊಯ್ಸಳ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಹೋಗಿ ಪ್ರಾಣ ಉಳಿಸಿದ್ರು. ನಂತರ ವಿಚಾರಣೆ ನಡೆಸಿದಾಗ ಆತ್ಮಹತ್ಯೆಗೆ ಕಾರಣ ಏನು ಅನ್ನೋದು ಬಹಿರಂಗವಾಗಿದೆ.
ಗೆಳತಿ ಮೇಲಿನ ಸಿಟ್ಟಿಗೆ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ನಂತೆ.ಯುವಕನ ಗೆಳತಿಯೇ ಕೊಟ್ಟ ಮಾಹಿತಿ ಮೇರೆಗೆ ಯುವಕನನ್ನ ಹೊಯ್ಸಳ ಸಿಬ್ಬಂದಿ ರಕ್ಷಣೆ ಮಾಡಿದ್ರು. ಸಾಫ್ಟ್ ವೇರ್ ಉದ್ಯೋಗಿ ಜಿತಿನ್ ನನ್ನ (26) ಪೊಲೀಸ್ರು ರಕ್ಷಣೆ ಮಾಡಿದ್ರು. ಜಿತಿನ್ ಕೇರಳ ಮೂಲದ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದು, ಆಕೆಯೂ ಕೂಡ ಬೆಂಗಳೂರಿನಲ್ಲೇ ಕೆಲಸ ಮಾಡುತ್ತಿದ್ದಾಳೆ.
ಆದ್ರೆ ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಮಧ್ಯರಾತ್ರಿ ಯುವತಿಗೆ ವಿಡಿಯೋ ಕಾಲ್ ಮಾಡಿದ್ದ ವೇಳೆ ಮತ್ತೆ ಇಬ್ಬರ ನಡುವೆ ಗಲಾಟೆಯಾಗಿದೆ.ವಿಡಿಯೋ ಕಾಲ್ ನಲ್ಲೇ ಜಿತಿನ್ ಕೈ ಕುಯ್ದುಕೊಂಡು ಕಾಲ್ ಕಟ್ ಮಾಡಿದ್ದಾನೆ. ಮತ್ತೆ ಕಾಲ್ ಮಾಡಿದ್ರು ಪಿಕ್ ಮಾಡಿರ್ಲಿಲ್ಲ. ಹೀಗಾಗಿ ಯುವತಿ ಜಿತಿನ್ ಮನೆ ವಿಳಾಸದೊಂದಿಗೆ ಪೊಲೀಸರಿಗೆ ಮಾಹಿತಿ ನೀಡಿದ್ಳು. ಮೊಬೈಲ್ ಲೊಕೇಷನ್ ಮೂಲಕ ಯುವಕನ ಪಿಜಿ ಪತ್ತೆ ಮಾಡಿದ ಪಿಎಸ್ಐ ಪರಶುರಾಮ್ ಹಾಗೂ ಮಲ್ಲೇಶ್ ಸಮಯಪ್ರಜ್ಞೆಯಿಂದ ಸರಿಯಾದ ಸಮಯಕ್ಕೆ ಯುವಕನ ರೂಮ್ ಬಳಿ ಹೋಗಿ ಯುವಕನನ್ನ ರಕ್ಷಣೆ ಮಾಡಿದ್ರು.
PublicNext
11/01/2025 02:37 pm