ದೊಡ್ಡಬಳ್ಳಾಪುರ: ಮಗನನ್ನ ನೋಡಲು ಅವಕಾಶ ಕೊಡಲಿಲ್ಲ ಎಂಬ ಕಾರಣಕ್ಕೆ ಕೋಪದಲ್ಲಿ ಮಾವನನ್ನೇ ಕೊಲೆಗೈದು ಪರಾರಿಯಾಗಿದ್ದ ಅಳಿಯನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಆರೂಢಿ ಗ್ರಾಮದ ಸುಬ್ಬರಾಯಪ್ಪ (65) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರತಾಪ್ ನನ್ನ ದೊಡ್ಡಬೆಳವಂಗಲ ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಕೋಲಾರ ಮೂಲದ ಪ್ರತಾಪ್ ಆರೂಢಿ ಗ್ರಾಮದ ಶಿಲ್ಪಾರನ್ನ ಪ್ರೀತಿಸಿ ಮದುವೆಯಾಗಿದ್ದ. ಹೆರಿಗಾಗಿ ತವರು ಮನೆಗೆ ಹೋಗಿದ್ದ ಶಿಲ್ಪಾ ಕಳೆದ ಒಂದೂವರೆ ವರ್ಷದಿಂದ ಗಂಡನ ಮನೆಗೆ ಹೋಗಿರಲಿಲ್ಲ. ಅಕ್ಟೋಬರ್ 4ರಂದು ಮಗನನ್ನ ನೋಡಲು ಹೆಂಡತಿ ಮನೆಗೆ ಬಂದಿದ್ದ. ಆದರೆ ಶಿಲ್ಪಾ ಮನೆಯವರು ಮಗನನ್ನ ನೋಡಲು ಅವಕಾಶವೇ ನೀಡಿರಲಿಲ್ಲ. ಇದೇ ಕೋಪದಲ್ಲಿ ಪ್ರತಾಪ್ ಮಾವನನ್ನ ಜೊತೆಯಲ್ಲಿ ಕರ್ಕೊಂಡು ಹೋಗಿ ಕೊಲೆ ಮಾಡಿದ್ದ.
ಈ ಸಮಯದಲ್ಲಿ ಅಪ್ಪ ಎಲ್ಲಿ ಎಂದು ಫೋನ್ ಮಾಡಿದ್ದ ಹೆಂಡತಿ ಜೊತೆಗೆ ಮಾತನಾಡುತ್ತಲೇ ಮಾವನ ಎದೆ ಮೇಲೆ ಕಾಲಿಟ್ಟು ಉಸಿರು ನಿಲ್ಲಿಸಿ ಕೊಲೆ ಮಾಡಿದ್ದಾಗಿ ಹೇಳಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ದೊಡ್ಡಬೆಳವಂಗಲ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
PublicNext
09/10/2022 08:56 pm