ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಒಡವೆ ಡಿಸೈನ್ ನೋಡೊ ನೆಪದಲ್ಲಿ ಸ್ನೇಹಿತೆ ಮನೆಯಲ್ಲಿ ಚಿನ್ನಾಭರಣ ದೋಚಿದ್ದ ಕಳ್ಳಿಯ ಬಂಧನ

ದೇವನಹಳ್ಳಿ: ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿ ಗುರುದರ್ಶನ ಬಡಾವಣೆಯ ಲಕ್ಷ್ಮೀರವರ ಮನೆಗೆ ಬಂದ ಸ್ನೇಹಿತೆ ಗೀತಾ ಎಂಬಾಕೆ 10ಕ್ಷ ಬೆಲೆಯ ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ದರು. ಈ ಸಂಬಂಧ ಚಿನ್ನಾಭರಣ ಕಳೆದುಕೊಂಡ ಲಕ್ಷ್ಮೀ ವಿದ್ಯಾರಣ್ಯಪುರ ‌ಪೊಲೀಸ್ ಠಾಣೆಲಿ ದೂರು ದಾಖಲಿಸಿದ್ದರು. ಲಕ್ಷ್ಮೀರವರಿಗೆ ಕೆಂಗೇರಿ ವಾಸಿ ಗೀತಾ ಸ್ನೇಹಿತೆಯಾಗಿದ್ದವರು . ಕಳೆದ ಆಗಸ್ಟ್ 16ರಂದು ಲಕ್ಷ್ಮೀ ರವರ ಮನೆಗೆ ಬಂದು ಒಡವೆಗಳ ಡಿಸೈನ್ ನೋಡಬೇಕೆಂದು ಬಂದು ಅರ್ದ ಕೆ.ಜಿ.ಗೂ ಅಧಿಕ ಬೆಲೆಯ ಚಿನ್ನ ಮತ್ತು ಬೆಳ್ಳಿಯ ಆಭರಣ ಕದ್ದೊಯ್ದಿದ್ದಳು.

ಈ ಬಗ್ಗೆ ದೂರು ದಾಖಲಿಸಿಕೊಂಡ ವಿದ್ಯಾರಣ್ಯಪುರ ಪೊಲೀಸರು ತನಿಖೆ ನಡೆಸಿ ಚಿನ್ನಾಭರಣ ಕದ್ದಿದ್ದ ಕಳ್ಳಿ ಗೀತಾಳನ್ನು ಬಂಧಿಸಿ, 215ಗ್ರಾ ಚಿನ್ನ ಮತ್ತು 231 ಗ್ರಾಂ ಬೆಳ್ಳಿಯ ಆಭರಣ ವಶಕ್ಕೆ ಪಡೆದಿದ್ದಾರೆ. ಸುಮಾರು 9.84.700 ಬೆಲೆಯ ಚಿನ್ನಾಭರಣ ವಶಕ್ಕೆ ಪಡೆದ ಪೊಲೀಸರು ಮಾಲೀಕರಿಗೆ ಒಪ್ಪಿಸಿದ್ದಾರೆ.

Edited By : Somashekar
PublicNext

PublicNext

18/09/2022 07:10 pm

Cinque Terre

35.89 K

Cinque Terre

1

ಸಂಬಂಧಿತ ಸುದ್ದಿ