ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಬೆಸ್ಕಾಂ ಇಂಜಿನಿಯರ್, ವಿದ್ಯಾರ್ಥಿ ಬಲಿ

ಬೆಂಗಳೂರು: ಇವತ್ತು ಬೆಂಗಳೂರಲ್ಲಿ ಅತಿ ವೇಗವಾಗಿ ಬಂದ ಕ್ಯಾಂಟರ್ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಬೆಸ್ಕಾಂ ಇಇ ಸಾವನ್ನಪ್ಪಿದ್ರೆ, ಓವರ್ ಟೇಕ್ ಮಾಡೋ ಬರದಲ್ಲಿ ಮುನ್ನುಗ್ಗಿದ ಮಿನಿ ಬಸ್ ಡಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿಯೊಬ್ಬ ಬಲಿಯಾಗಿದ್ದಾನೆ. ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಅಮಾಯಕರ ಜೀವ ಹೋಗಿರುವ ಘಟನೆ ಸಿಕಿಕಾನ್ ಸಿಟಿಯಲ್ಲಿ ನಡೆದಿದೆ‌.

ಇಲ್ಲಿ ಇರೋ ಟ್ರಾಫಿಕ್‌ನಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಅಪಘಾತಗಳು ಸಂಭವಿಸ್ತಲೇ ಇರುತ್ತವೆ. ಆದರೆ ವೀಕೆಂಡ್‌ನ ಕಡಿಮೆ ಟ್ರಾಫಿಕ್‌ನಲ್ಲಿಯೂ ಕೆಲ ಚಾಲಕರ ಅಜಾಗರೂಕತೆಯಿಂದ ಸಂಭವಿಸೋ ಅಪಘಾತಗಳಿಗೆ ಅಮಾಯಕ ಜೀವಗಳು ಬಲಿಯಾಗ್ತಾವೆ. ಅದಕ್ಕೆ ಸಾಕ್ಷಿ ಇವತ್ತು ನಡೆದ ಎರಡು ರಸ್ತೆ ಅಪಘಾತಗಳು. ಅವುಗಳಲ್ಲಿ ಓವರ್ ಸ್ಪೀಡಾಗಿ‌ ಬಂದ ಕ್ಯಾಂಟರ್ ಡಿಕ್ಕಿ ಹೊಡೆದು ಕೆಲಸಕ್ಕೆ ಹೋಗ್ತಿದ್ದ ಬೆಸ್ಕಾಂ ಎಕ್ಸಿಕ್ಯುಟಿವ್ ಇಂಜಿನಿಯರ್ ಜೀವ ಕಳೆದುಕೊಂಡ್ರೆ, ಓವರ್ ಟೇಕ್ ಮಾಡೋ ಭರದಲ್ಲಿ ಮುನ್ನುಗ್ಗಿದ ಮಿನಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದು ವಿದ್ಯಾರ್ಥಿಯನ್ನ ಬಲಿ ಪಡೆದಿದೆ.

ಅದ್ರಲ್ಲಿ ಮೊದಲ ಪ್ರಕರಣದ ಬಗ್ಗೆ ಹೇಳೊದಾದ್ರೆ ಪೋಟೋದಲ್ಲಿ ಕಾಣ್ತಿರೋ ಈಕೆ ಹೆಸ್ರು ಮಂಜುಳಾ. ಬೆಂಗಳೂರಿನ ನಾಯಂಡಹಳ್ಳಿ ನಿವಾಸಿ. ವೃತ್ತಿಯಲ್ಲಿ ಬೆಸ್ಕಾಂನಲ್ಲಿ ಎಕ್ಸಿಕ್ಯುಟಿವ್ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ರು. ಎಂದಿನಂತೆ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಮನೆಯಿಂದ ದ್ವಿಚಕ್ರ ವಾಹನದಲ್ಲಿ ನಾಗರಬಾವಿ ಸಮೀಪದ ಕಚೇರಿಯತ್ತ ಪ್ರಯಾಣ ಬೆಳೆಸಿದ್ರು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಕ್ಯಾಂಟರ್ ಲಾರಿ ಮಂಜುಳ ಬೈಕ್ ಗೆ ಡಿಕ್ಕಿ ಹೊಡೆದಿದೆ. ಆ ವೇಳೆ ಕಂಟ್ರೋಲ್ ತಪ್ಪಿ ಕೆಳಬಿದ್ದ ಮಂಜುಳಾ ಮೇಲೆ ಕ್ಯಾಂಟರ್ ಲಾರಿಯ ಚಕ್ರ ಹರಿದಿದ್ದು, ಮಂಜುಳಾ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ.

ಮತ್ತೊಂದೆಡೆ ಅಪಘಾತವಾಗುತ್ತಿದ್ದಂತೆ ಕ್ಯಾಟರ್ ಚಾಲಕ ಎಸ್ಕೇಪ್ ಆಗಲು ಯತ್ನಿಸಿದ್ದು, ಆತನನ್ನ ಹಿಡಿದ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿ, ಪೊಲೀಸ್ರ ವಶಕ್ಕೆ ಒಪ್ಪಿಸಿದ್ದು, ಸ್ಥಳೀಯರು ನಡೆಸಿದ ಹಲ್ಲೆಯಿಂದ ಗಾಯಗೊಂಡಿರೋ ಚಾಲಕ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮತ್ತೊಂದು ಪ್ರಕರಣದಲ್ಲಿ ಓವರ್ ಟೇಕ್ ಮಾಡುವ ಭರದಲ್ಲಿ ಮುನ್ನುಗ್ಗಿದ ಮಿನಿ ಬಸ್ ಡಿಕ್ಕಿ ಹೊಡೆದ ಹಿನ್ನೆಲೆ ಕಾಲೇಜು ವಿದ್ಯಾರ್ಥಿ ಶ್ರೇಯಸ್ ಬಲಿಯಾಗಿದ್ದಾನೆ. ಬೆಂಗಳೂರು‌ ಯೂನಿವರ್ಸಿಟಿಯ ಗೇಟ್ ಬಳಿ ಈ ದುರಂತ ನಡೆದಿದ್ದು, ಶ್ರೇಯಸ್ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ.ಸದ್ಯ ಈ ಎರಡು ಅಪಘಾತಗಳಿಗೆ ಸಂಬಂಧಿಸಿದಂತೆ ಬ್ಯಾಟರಾಯನಪುರ ಹಾಗೂ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕರನ್ನ ವಶಕ್ಕೆ ಪಡೆದಿರುವ ಸಂಚಾರಿ ಪೊಲೀಸ್ರು ತನಿಖೆ ಮುಂದುವರೆಸಿದ್ದಾರೆ.

Edited By : Vijay Kumar
Kshetra Samachara

Kshetra Samachara

09/10/2022 07:26 pm

Cinque Terre

4.47 K

Cinque Terre

0

ಸಂಬಂಧಿತ ಸುದ್ದಿ