ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೈಕ್ ಸವಾರನ ಹಿಟ್‌ ಅಂಡ್ ರನ್‌ಗೆ ಯುವಕ ಆಸ್ಪತ್ರೆ ಪಾಲು

ಯಲಹಂಕ: ಯಲಹಂಕ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಅಟ್ಟೂರು ರಸ್ತೆ ವೀರಸಾಗರ ಬಳಿ ಒಂದು ಬೈಕ್ ಮತ್ತೊಂದು ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಕಾಲೇಜ್ ಯುವಕ ಆಸ್ಪತ್ರೆ‌ ಪಾಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ಘಟನೆ ನಡೆದಿದೆ. ಅಪಘಾತದ ಸಿಸಿಟಿವಿ ಎಂತಹವರ ಆಶ್ಚರ್ಯಚಕಿತಗೊಳಿಸುತ್ತೆ. ರಸ್ತೆಯಲ್ಲಿ ಬಿದ್ದ ಬೈಕ್ ಸವಾರ ಆಸ್ಪತ್ರೆಗೆ ದಾಖಲಾಗಿದ್ದರೆ, ಎಸ್ಕೇಪ್ ಆಗಿರುವ ಬೈಕ್ ಸವಾರನಿಗಾಗಿ ಯಲಹಂಕ ಸಂಚಾರಿ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದಾರೆ.

ಹೆಲ್ಮೆಟ್ ಹಾಕದೆ ಒಬ್ಬ ಬೈಕ್ ಸವಾರ ಮುಂದೆ ಬರ್ತಿದ್ದಾನೆ. ಹಿಂದಿನಿಂದ ಅತಿವೇಗವಾಗಿ ಬಂದ ಬೈಕ್ ಹಿಟ್ ಮಾಡಿ ಎಸ್ಕೇಪ್ ಆಗಿದೆ. ಹಿಟ್ ಆದ ಕಾರಣ‌ ನಿಯಂತ್ರಣ ತಪ್ಪಿದ ಬೈಕ್ ಸವಾರ ಸ್ಥಳದಲ್ಲೆ ಬಿದ್ದು ಗಾಯಗೊಂಡಿದ್ದಾನೆ. ಬೈಕ್ ಸವಾರ ಬಿದ್ದರು ಟಚ್ ಮಾಡಿದ ಹೈಷಾರಾಮಿ ಬೈಕ್ ಆಸಾಮಿ‌ ನಿಲ್ಲಿಸದೆ ಎಸ್ಕೇಪ್ ಆಗಿದ್ದಾನೆ. ಘಟನೆ ಸಂಬಂಧ ಪ್ರಕರಣ ‌ದಾಖಿಸಿರುವ ಪೊಲೀಸರು ಎಸ್ಕೇಪ್ ಆಗಿರುವ ಬೈಕ್ ಸವಾರನನ್ನು ಶೀಘ್ರವಾಗಿ ಬಂಧಿಸುವ ಭರವಸೆ ನೀಡಿದ್ದಾರೆ.

Edited By : Manjunath H D
PublicNext

PublicNext

05/10/2022 09:10 am

Cinque Terre

37.66 K

Cinque Terre

0

ಸಂಬಂಧಿತ ಸುದ್ದಿ