ಲೈಸನ್ಸ್ ಇರೋ ಸ್ವಂತ ಸಿಂಗಲ್ ಬ್ಯಾರಲ್ ಬಂದೂಕಿನಿಂದಲೇ ಸೆಕ್ಯುರಿಟಿ ಗಾರ್ಡ್ ಗುಂಡುಹಾರಿಸಿಕೊಂಡ ಘಟನೆ ತಾಲೂಕಿನ ಟಿ.ಬೇಗೂರು ಸಮೀಪದ ಹುಚ್ಚೇಗೌಡಪಾಳ್ಯದ ಮುರುಳಿ ಮೋಹನ್ ಗೋದಾಮಿನಲ್ಲಿ ನಡೆದಿದೆ.
ಮಡಿಕೇರಿ ಮೂಲದ ಕೆ.ಎನ್.ಭೀಮಯ್ಯ (65) ಮೃತ ದುರ್ದೈವಿ. ಕಳೆದ ಮೂರು ವರ್ಷಕದಿಂದ ಟಿ.ಬೇಗೂರು ಸಮೀಪದ ಬ್ಯಾಡರಹಳ್ಳಿಯಲ್ಲಿ ವಾಸವಾಗಿದ್ದರು. ಪೂರ್ವಶಿ ಸೆಕ್ಯುರಿಟಿ ಏಜೆನ್ಸಿಯ ಸಿಬ್ಬಂದಿಯಾಗಿದ್ದ ಭೀಮಯ್ಯ ಆತ್ಮಹತ್ಯೆ ಮಾಡಿಕೊಂಡರೆ ಇಲ್ಲವೇ ಮಿಸ್ ಫಯರ್ ಆಗಿದೆ ಅನ್ನೋ ಅನುಮಾನವೂ ಈಗ ಮೂಡಿದೆ.
ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡ ಸಮೇತ ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಸಿಪಿಐ ರಾಜೀವ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
18/02/2022 11:24 am