ಬೆಂಗಳೂರು: ಜಾಲಿ ರೈಡ್ ಗೆ ಹೋಗಿದ್ದ ಕೋಟಿ ಕೋಟಿ ಬೆಲೆಬಾಳೋ ಲ್ಯಾಂಬೋರ್ಗಿನಿ ಕಾರು ಜ್ಞಾನಭಾರತಿ ಯೂನಿವರ್ಸಿಟಿ ಬಳಿ ಅಪಘಾತವಾಗಿದೆ.
ನ್ಯಾಷನಲ್ ಲಾ ಕಾಲೇಜ್ ಬಳಿ ಅಪಘಾತ ವಾಗಿದ್ದು,ಚಾಲಕನ ನಿಯಂತ್ರಣ ತಪ್ಪಿ ಕಾರು ಕರೆಂಟ್ ಪೋಲ್ ಗೆ ಡಿಕ್ಕಿಯಾಗಿ ಕಾರೂ ಸಂಪೂರ್ಣ ಜಕಂ ಆಗಿದೆ.ಗ್ಲೋಬಲ್ ಟೆಕ್ ಪಾರ್ಕ್ ಮಾಲೀಕತ್ವದಲ್ಲಿರುವ ಕಾರು ಇದಾಗಿದ್ದು ಉದ್ಯಮಿ ಸತೀಶ್ ಪ್ರಫುಲ್ಲ ಚಂದ್ರ ಹೆಸರಲ್ಲಿ ಕಾರು ರಿಜಿಸ್ಟರ್ ಆಗಿದ್ದು, ಉದ್ಯಮಿ ಸಿದ್ದಾರ್ಥ ಕಾರು ಚಲಾಯಿಸುತ್ತಿದ್ದ ಎಂದು ತಿಳಿದು ಬಂದಿದೆ.
ಲ್ಯಾಂಬೋರ್ಗಿನಿ ಕಂಪನಿ ನಿರ್ಮಿತ ಹೈ ಎಂಡ್ ಕಾರಿನಲ್ಲಿ ಅತೀ ವೇಗವಾಗಿ ಬಂದು ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.
PublicNext
03/10/2022 10:01 pm