ದೊಡ್ಡಬಳ್ಳಾಪುರ : ಕೆಮಿಕಲ್ ಪ್ಯಾಕ್ಟರಿಯಲ್ಲಿ ಕೆಮಿಕಲ್ಸ್ ಸ್ಪೋಟಗೊಂಡು ಹೊತ್ತಿ ಉರಿಯುತ್ತಿದೆ. ಇದರಿಂದ ಸುತ್ತಮುತ್ತ ದಟ್ಟವಾದ ಹೊಗೆ ಆವರಿಸಿದ್ದು ಆತಂಕದ ವಾತಾವರಣ ಸೃಷ್ಟಿಯಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ರೆಸೋನೆನ್ಸ್ ಲ್ಯಾಬರೇಟರೀಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಘಟನೆ ನಡೆದಿದ್ದು, ಇಂದು ಬೆಳಗ್ಗೆ 9 ಗಂಟೆ ಸಮಯದಲ್ಲಿ ಕೆಮಿಕಲ್ಸ್ ಸ್ಪೋಟಗೊಂಡು ಹೊತ್ತಿ ಉರಿಯುತ್ತಿದೆ.
ಇನ್ನು ಸ್ಪೋಟದಿಂದ ದಟ್ಟವಾದ ಹೊಗೆ ಸುತ್ತಮುತ್ತಲಿನ ಪ್ರದೇಶಕ್ಕೆ ಆವರಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿದ್ದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
ಘಟನೆ ನಡೆದ ವೇಳೆಯಲ್ಲಿ ಪ್ಯಾಕ್ಟರಿಯಲ್ಲಿ 30ಕ್ಕೂ ಹೆಚ್ಚು ಕಾರ್ಮಿಕರಿದ್ದು, ಎಲ್ಲ ಕಾರ್ಮಿಕರು ಘಟನೆ ನಡೆದ ವೇಳೆ ಹೊರಗೆ ಬಂದು ಅವಘಡದಿಂದ ಪರಾರಿಯಾಗಿದ್ದಾರೆ. ಕಳೆದ 30 ವರ್ಷಗಳಿಂದ ರೆಸೋನೆನ್ಸ್ ಲ್ಯಾಬರೇಟರೀಸ್ ಪ್ರೈವೇಟ್ ಲಿಮಿಟೆಡ್ ಕಾರ್ಯ ನಿರ್ವಹಿಸುತ್ತಿದ್ದು, ಔಷಧಿ ಮಾತ್ರೆಗಳಿಗೆ ಬೇಕಾದ ರಸಾಯನಿಕಗಳನ್ನ ಉತ್ಪತ್ತಿ ಮಾಡುತ್ತಿತ್ತು.
ಸದ್ಯ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಬೆಂಕಿ ಅವಘಡದಿಂದ ಆದ ನಷ್ಟವನ್ನ ಅಂದಾಜು ಮಾಡಲಾಗುತ್ತಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
PublicNext
26/09/2022 12:49 pm