ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಓರ್ವ ಯುವಕ ಸಾವನ್ನಪ್ಪಿದ್ದಾನೆ.
ಮೃತ ಯುವಕನನ್ನು ಸುಮನ್ ಎಂದು ಗುರುತಿಸಲಾಗಿದೆ. ಬೈಕ್‌ನಲ್ಲಿ ಹೊರಟಿದ್ದ ಸುಮನ್ ಒನ್ ವೇಗೆ ಎಂಟ್ರಿ ಕೊಟ್ಟಿದ್ದ. ಹೀಗಾಗಿ ಯೂ ಟರ್ನ್ ತೆಗೆದುಕೊಳ್ಳಲು ಮುಂದಾಗಿದ್ದಾಗ ಎದುರಿನಿಂದ ಬಂದ ಲಾರಿ ಬೈಕ್‌ಗೆ ಗುದ್ದಿದೆ. ನಂತರ ಲಾರಿ ಅಡಿಯಲ್ಲಿಯೇ ಬೈಕ್ ಸಿಲುಕಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ 300 ಮೀಟರ್‌ವರೆಗೂ ಬೈಕ್ ಅನ್ನು ಎಳೆದೊಯ್ದಿದೆ. ರಸ್ತೆಗೆ ಬೈಕ್ ಉಜ್ಜಿದ ಪರಿಣಾಮ ಬೆಂಕಿ ಕಾಣಿಸಿಕೊಂಡು ಲಾರಿ ಹಾಗೂ ಬೈಕ್ ಹೊತ್ತಿ ಉರಿದಿವೆ. ಈ ಘಟನೆಯು ಸದಾಶಿವನಗರ ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
16/09/2022 10:24 am