ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುಷ್ಪ ಕೃಷಿ ಬೆಳೆಗೆ ಸದುಪಯೋಗ

ಆನೇಕಲ್ ತಾಲ್ಲೂಕಿನ ಮರಸೂರು ಗೇಟ್ ಬಳಿಯಿರುವ ಆರ್.ಟಿ.ಓ ಕಚೇರಿ ಮುಂಭಾಗದಲ್ಲಿ ಆನೇಕಲ್ ತಾಲ್ಲೂಕು ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ದಿ ಸಂಘದ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಇನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆನೇಕಲ್ ತಾಲ್ಲೂಕು ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕೂನು ಮಡಿವಾಳ ಸೋಮಣ್ಣ ರವರು ವಹಿಸಿದ್ದರು.

ಇನ್ನು ಇದೇ ಸಂಧರ್ಭದಲ್ಲಿ ರೈತರು ಮತ್ತು ಸಂಘದ ಸದಸ್ಯರು ತಮ್ಮ-ತಮ್ಮ ಸಮಸ್ಯೆಗಳು ಹಾಗೂ ಅಭಿಪ್ರಾಯಗಳನ್ನು ಸಭೆಯಲ್ಲಿ ತಿಳಿಸಿದರು. ಇನ್ನು ಈ ವೇಳೆ ಆನೇಕಲ್ ತಾಲ್ಲೂಕು ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕೂನುಮಡಿವಾಳ ಸೋಮಣ್ಣ ಮಾತನಾಡಿ ಹಸಿರು ಮನೆ ಬೆಳೆಗಾರರ ಮತ್ತು ರೈತರ ಸಮಸ್ಯೆಗಳಿಗೆ ಪರಿಹಾರವನ್ನು ಕಲ್ಪಿಸಿ ಕೊಡಬೇಕು ಮತ್ತು ಸರ್ಕಾರದಿಂದ ಬರುವಂತಹ ಸೌಲಭ್ಯಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಬೇಕು ಎಂಬುವ ಉದ್ದೇಶದಿಂದ ಈ ಕಚೇರಿಯನ್ನು ಪ್ರಾರಂಭಿಸಿದ್ದು ಹಸಿರು ಮನೆ ಬೆಳೆಗಾರರು ಮತ್ತು ರೈತರು ತಮಗೆ ಆಗುತ್ತಿರುವ ತೊಂದರೆಗಳ ಬಗ್ಗೆ ನಮ್ಮ ಸಂಘಕ್ಕೆ ಲಿಖಿತ ರೂಪದಲ್ಲಿ ತಿಳಿಸಿದಾಗ ಆ ಸಮಸ್ಯೆಗೆ ಪರಿಹಾರ ನೀಡಲು ಆನೇಕಲ್ ತಾಲ್ಲೂಕು ಹಸಿರು ಮನೆ ಬೆಳೆಗಾರರ ಕ್ಷೇಮಾಭಿವೃದ್ದಿ ಸಂಘವು ಬದ್ದವಾಗಿದೆ ಎಂದು ಹೇಳಿದರು.

ಇನ್ನು ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಕೆ.ದನುಂಜಯ್ಯ, ತೋಟಗಾರಿಕೆ ಇಲಾಖೆಯ ಕೇಶವಮೂರ್ತಿ, ರೈತ ಮುಖಂಡ , ರೈತರು ಭಾಗವಹಿಸಿದ್ದರು.

Edited By : PublicNext Desk
Kshetra Samachara

Kshetra Samachara

30/09/2022 10:35 pm

Cinque Terre

644

Cinque Terre

0