ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪುರಾಣ ಪ್ರಸಿದ್ಧ ಕಲ್ಕುಂಟೆ ರಂಗನಾಥನಿಗೆ 2ವರ್ಷಗಳ ನಂತರ ವಿಜೃಂಭಣೆಯ ಬ್ರಹ್ಮರಥೋತ್ಸವ

ಬೆಂಗಳೂರು: ಇಲ್ಲಿಯ ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕಲ್ಕುಂಟೆ ಅಗ್ರಹಾರದ ಪುರಾಣ ಪ್ರಸಿದ್ಧ ಶ್ರೀರಂಗನಾಥ ಸ್ವಾಮಿಗೆ "ಶ್ರೀರಂಗನಾಯಕಿ ಗೋದ-ಸಮೇತ ಶ್ರೀರಂಗನಾಥಸ್ವಾಮಿಗೆ ಪಾಲ್ಗುಣಮಾಸ ಚತುರ್ದಶಿ ಗುರುವಾರ ಪುಬ್ಬಾ ನಕ್ಷತ್ರದಲ್ಲಿ ಬ್ರಹ್ಮರಥೋತ್ಸವ ನೆರವೇರಿತು.

ಬೆಂಗಳೂರು, ಬೆಂ.ಗ್ರಾಮಾಂತರ ಕೋಲಾರ, ತಮಿಳುನಾಡುಗಳಿಂದ ಆಗಮಿಸಿದ್ದ ಸಾವಿರಾರು ಜನ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.

ಒಂದು ವಾರದಿಂದ ವಿವಿಧ ಧಾರ್ಮಿಕ & ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾಗಮದಲ್ಲಿ ಜಾತ್ರಾಮಹೋತ್ಸವ ನಡೆಯುತ್ತಿದೆ. ವಾದ್ಯ ಮೇಳದೊಂದಿಗೆ ಹೊರಟ ಭವ್ಯ ರಥಕ್ಕೆ ಭಕ್ತರು ಧ್ವನಿ, ಹಣ್ಣು ಸಮರ್ಪಿಸಿದರು.

ಮಹೋತ್ಸವದಲ್ಲಿ ಶ್ರೀರಂಗನಾಥ ಸ್ವಾಮಿಗೆ ಅಭೂತಪೂರ್ಣ ವಸ್ತ್ರ, ಸುವರ್ಣ ಕಲಶ, ಧಾರ್ಮಿಕ ಲಾಂಛನ, ಮಕರ, ತೋರಣ, ಕಲಶ, ಕನ್ನಡಿ ಹಾಗು ವಿವಿಧ ಬಗೆಯ ಪುಷ್ಪಮಾಲೆಗಳಿಂದ ಅಲಂಕೃತವಾದ ರಥದಲ್ಲಿ ಸ್ವಾಮಿಗೆ ಪೂಜೆ ಸಲ್ಲಿಸಲಾಯಿತು.

ರಥ ಸಾಗಿದ ಮಾರ್ಗದ ಉದ್ದಕ್ಕೂ ವಿವಿಧ ಜಾನಪದ ಕಲಾ ತಂಡ ಆಕರ್ಷಕ ಪ್ರದರ್ಶನ ನೀಡಿದವು. ರಥೋತ್ಸವದಲ್ಲಿದ್ದ ಭಕ್ತಾದಿಗಳು ಪಾನಕ, ನೀರು, ಮಜ್ಜಿಗೆ ಸ್ವೀಕರಿಸಿ ಬಿಸಿಲ ಬೇಗೆಲಿದ್ದ ಭಕ್ತರು ತಂಪಾದರು.

ಕಳೆದ ಎರಡು ವರ್ಷ ಕೊರೋನಾ ಹಿನ್ನಲೆಯಲ್ಲಿ ಬ್ರಹ್ಮರಥೋತ್ಸವ ನಡೆದಿರಲಿಲ್ಲ.ಈ ಸಲ ಕೊರೋನಾ ದೂರವಾಗಿ ಕಲ್ಕುಂಟೆಯ ಬ್ರಹ್ಮ ರಥೋತ್ಸವ ಅತ್ಯದ್ಭುತ ಸಡಗರ ಸಂಭ್ರಮಕ್ಕೆ ಕಾರಣವಾಗಿತ್ತು..

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಹೊಸಕೋಟೆ

Edited By : Manjunath H D
Kshetra Samachara

Kshetra Samachara

18/03/2022 10:18 am

Cinque Terre

4.19 K

Cinque Terre

3