ದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿಹಳ್ಳಿ ಕೆರೆ ಸುತ್ತಮುತ್ತಲಿನ ಜಮೀನುಗಳಲ್ಲಿ ಬಸವನ ಹುಳು (ಆಫ್ರಿಕನ್ ಜೈನ್ಟ್ ಲ್ಯಾಂಡ್ ಸ್ನೇಯ್ಲ್) ಹಾವಳಿ ಹೆಚ್ಚಾಗಿದೆ. ತೋಟಗಾರಿಕೆ ಬೆಳೆಗಳಾದ ಹೂಕೋಸು, ಟೊಮ್ಯಾಟೊ, ಬದನೆ ಗಿಡದ ಪೈರನ್ನು ತಿನ್ನಲು ಜಮೀನಿಗೆ ಲಗ್ಗೆ ಇಡುತ್ತಿವೆ.
ತರಕಾರಿ ಫಸಲು ಬಂದಾಗ ಸಹ ಫಸಲನ್ನು ತಿಂದು ಹಾಕುತ್ತಿವೆ ಬಸವನ ಹುಳುಗಳು. ಹುಳು ನಿಯಂತ್ರಣಕ್ಕೆ ಔಷಧಿ ಸಿಂಪಡಿಸಿದರೆ ಹುಳು ತಿನ್ನುವ ಪ್ರಾಣಿ- ಪಕ್ಷಿಗಳು ಸಾವನ್ನಪ್ಪಿದ್ರೆ ಎಂಬ ಚಿಂತೆ ರೈತ ಮುನಿಶ್ಯಾಮಪ್ಪ ಅವರದ್ದು.
ಆಫ್ರಿಕಾದ ಬಸವನ ಹುಳು ಒಂದು ಆಕ್ರಮಣಕಾರಿ ಪ್ರಭೇದ. ಆಫ್ರಿಕಾದಿಂದ ರಫ್ತು ಮಾಡುವ ಕೆಲವು ವಸ್ತುಗಳಲ್ಲಿ ಭಾರತಕ್ಕೆ ಬಂದಿವೆ. ತೇವಾಂಶವಿರುವ ಕೃಷಿ ಭೂಮಿಗೆ ಹೆಚ್ಚಿನ ಪ್ರಮಾಣದಲ್ಲಿ ಮುತ್ತಿಗೆ ಹಾಕುತ್ತವೆ. ಒಮ್ಮೆಗೆ 200ಕ್ಕೂ ಹೆಚ್ಚು ಮೊಟ್ಟೆ ಇಡುವ ಈ ಹುಳು, ಕಡಿಮೆ ಅವಧಿಯಲ್ಲಿ ಸಂತತಿ ವೃದ್ಧಿಸುತ್ತವೆ! ಕೇರಳದ ಕೊಚ್ಚಿಯಲ್ಲಿ ಬಸವನ ಹುಳು ಹಾವಳಿ ಹೆಚ್ಚಾದಾಗ ನಿಯಂತ್ರಣಕ್ಕಾಗಿ ಸರ್ಕಾರವೇ ಮುಂದೆ ಬಂದಿದೆ. ನಮ್ಮ ರಾಜ್ಯದಲ್ಲೂ ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಪರಿಸರ ಪ್ರೇಮಿ ಲೋಹಿತ್ ಮನವಿ ಮಾಡಿದ್ದಾರೆ.
Kshetra Samachara
08/12/2021 09:35 pm