ಬೆಂಗಳೂರು: ನೈಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಕ್ಯಾಂಟರ್ ಗಾಂಡಿ ಹೊತ್ತಿಉರಿದಿದೆ. ಟೈರ್ ಹೀಟ್ ಆಗಿ ಬೆಂಕಿ ಬಿದ್ದ ಹಿನ್ನಲೆ ಇಡೀ ವಾಹನಕ್ಕೆ ಆವರಿಸಿಕೊಂಡ ಬೆಂಕಿ ನೋಡ ನೋಡ್ತಿದ್ದಂತೆ ಧಗಸಧಗಿಸಿದೆ.
ಕೆಂಗೇರಿಯ ನೈಸ್ ರಸ್ತೆಯಲ್ಲಿ ಘಟನೆ ನಡೆದಿದ್ದು, ಕೇರಳದಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಗುಜರಾತ್ ನೊಂದಣಿಯ ಕ್ಯಾಂಟರ್ ವಾಹನ ಇದಾಗಿದೆ. ನೂರ್ ಸಲೀಂ ಎಂಬಾತ ವಾಹನ ಚಲಾಯಿಸುತ್ತಿದ್ದು ಬೆಂಕಿ ಹೊತ್ತಿಕೊಂಡ ತಕ್ಷಣ ವಾಹ ನಿಲ್ಲಿಸಿ ಲಾರಿಯಿಂದ ಇಳಿದು ಪ್ರಾಣ ಉಳಿಸಿಕೊಂಡಿದ್ದಾನೆ. ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
PublicNext
09/10/2022 07:04 pm