ನೆಲಮಂಗಲ: ಜೀವನದಲ್ಲಿ ಜಿಗುಪ್ಸೆಗೊಂಡ ಕ್ಯಾಂಟರ್ ಚಾಲಕನೋರ್ವ ರೈಲಿಗೆ ಸಿಲುಕಿ ಸಾವನ್ನಪ್ಪಿದ ದಾರುಣ ಘಟನೆ ತುಮಕೂರು ಬೆಂಗಳೂರು ರೈಲು ಮಾರ್ಗದ ದಾಬಸ್‌ಪೇಟೆ ಬಳಿ ನೆಡೆದಿದೆ.
ಇನ್ನೂ ನೆಲಮಂಗಲ ತಾಲ್ಲೂಕಿನ ದಾಬಸ್‌ಪೇಟೆ ನಿವಾಸಿ ಗಂಗಾಧರ್ (31) ಮೃತ ವ್ಯಕ್ತಿ ಎನ್ನಲಾಗಿದ್ದು, ಕಳೆದೊಂದುವರೆ ವರ್ಷದ ಹಿಂದೆ ಮದುವೆಯಾಗಿತ್ತು. ಮೃತನ ಸಾವಿಗೆ ಇದುವರೆಗೂ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿದ ಯಶವಂತಪುರ ರೈಲ್ವೇ ಪೊಲೀಸ್ರು ಪ್ರಕರಣ ದಾಖಲಿಸಿಕೊಂಡು, ಸದ್ಯ ಮೃತದೇಹವನ್ನ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಸುಮಿತ್ರ, ಪಬ್ಲಿಕ್ ನೆಕ್ಸ್ಟ್, ನೆಲಮಂಗಲ
PublicNext
28/08/2022 09:23 pm