ಬೆಂಗಳೂರು: ಬೆಂಗಳೂರಲ್ಲಿನ ರಸ್ತೆ ಗುಂಡಿಗೆ ಬಲಿಯಾಗುವವರ ಸಂಖ್ಯೆ ಕಡಿಯಾಗುವಂತೆ ಕಾಣುತ್ತಿಲ್ಲ. ಹೈಕೋರ್ಟ್ ಎಷ್ಟೇ ಚಾಟಿ ಬೀಸಿದ್ರು. ರಸ್ತೆಗುಂಡಿ ಮಾತ್ರ ಮುಚ್ಚುತ್ತಿಲ್ಲ. ಅದ್ರಲ್ಲೂ ಸಚಿವ ಸೋಮಶೇಖರ್ ಕ್ಷೇತ್ರದಲ್ಲಿ ರಸ್ತೆ ಗುಂಡಿ ಹೆಚ್ಚಾಗಿದ್ದು, ಮುಖ್ಯರಸ್ತೆಯಿಂದ ಹಿಡಿದು ಉಪ ರಸ್ತೆಗಳು ಹಾಗೂ ಗಲ್ಲಿ ರಸ್ತೆಗಳು ಸಂಪೂರ್ಣ ಗುಂಡಿಮಯವಾಗಿದೆ.
ಇದೇ ರಸ್ತೆಗುಂಡಿಗೆ 44ವರ್ಷದ ಸುಪ್ರಿತ್ ಬಲಿಯಾಗಿದ್ದಾರೆ. ಕಳೆದ 18 ನೇ ತಾರೀಖು ಸುಪ್ರಿತ್ ಮಗಳನ್ನ ಕಾಲೇಜಿಗೆ ಬಿಟ್ಟು ಬರುವಾಗ ಹೇರೋಹಳ್ಳಿ ರಸ್ತೆಯ ಗುಂಡಿಗೆ ಬಿದ್ದು ಗಾಯಗೊಂಡಿದ್ರು. ಆ ವೇಳೆ ಅವರನ್ನು ಚಿಕಿತ್ಸೆಗೆ ಆಸ್ಪತ್ರೆ ದಾಖಲಿಸಿದ್ರು ಆದರೆ ಚಿಕಿತ್ಸೆ ಫಲಿಸದೆ ಸುಪ್ರಿತ್ ನಿನ್ನೆ ಸಾವನ್ನಪ್ಪಿದ್ದಾರೆ.
ಇನ್ನೂ ಇದೇ ವಾರ್ಡ್ ನಲ್ಲಿ ಕಳೆದ ಬಾರಿ ಕೂಡ ರಸ್ತೆಗುಂಡಿಗೆ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ್ರು. ಇನ್ನೂ ಸಚಿವ ಸೋಮಶೇಖರ್ ಮಹಿಳೆ ಸತ್ತಾಗ ರಸ್ತೆಗೆ ತೇಪೆ ಹಾಕುವ ಕೆಲಸಮಾಡಿಸಿದ್ದು ಬಿಟ್ರೆ ರಸ್ತೆ ಸರಿಪಡಿಸುವ ಕೆಲಸಕ್ಕೆ ಕೈ ಹಾಕಲಿಲ್ಲ. ಇನ್ನೂ ಸುಪ್ತ ಮತದ ಕುಟುಂಬಸ್ಥರು ಘಟನೆಗೆ ಬಿಬಿಎಂಪಿ ಕಾರಣ ಎಂದು ಆರೋಪಿಸಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
PublicNext
23/08/2022 10:48 pm