ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಅಮಾಯಕ ಜೀವ ಬಲಿ

ಬೆಂಗಳೂರು: ಶನಿವಾರ ಸಂಜೆ ದ್ವಿಚಕ್ರ ವಾಹನ ಸವಾರ ಬಿಬಿಎಂಪಿ ನಿರ್ಲಕ್ಷದಿಂದ ಬಿಎಂಟಿಸಿ ಬಸ್‌ನ ಅಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಿಟಿಎಂ ಲೇಔಟ್ ಕುವೆಂಪು ನಗರ ಬಸ್ ನಿಲ್ದಾಣದ ಬಳಿ ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಬಿಟಿಎಂ ಲೇಔಟ್‌ನ ಕಡೆಗೆ ಬರುವ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದೆ.

35 ವರ್ಷದ ಶಿವಕುಮಾರ್ ಎಂದಿನಂತೆ ಕೆಲಸ ಮುಗಿಸಿ ನಾಗರಬಾವಿಯ ತಮ್ಮ ನಿವಾಸಕ್ಕೆ ಮರಳುವಾಗ ಬಿಟಿಎಂ ಲೇಔಟ್ ಕುವೆಂಪು ನಗರ ಬಸ್ ಸ್ಟಾಪ್ ಬಳಿ ಮುಖ್ಯ ರಸ್ತೆ ಮೇಲೆ ಇದ್ದ ಸಿಮೆಂಟ್ ಸ್ಲ್ಯಾಬ್ ಮತ್ತು ಗುಂಡಿಗೆ ಸ್ಕಿಡ್ಡಾಗಿ ಬೈಕ್ ನಿಯಂತ್ರಣ ಕಳೆದುಕೊಂಡು ಬಿಎಂಟಿಸಿ ಬಸ್‌ನ ಅಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ನಂತರ ಸ್ಥಳಕ್ಕೆ ಬಂದ ಮಡಿವಾಳ ಸಂಚಾರಿ ಪೊಲೀಸರು ಮೃತದೇಹವನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಿ ಬಿಎಂಟಿಸಿ ಬಸ್ಸನ್ನು ವಶಕ್ಕೆ ಪಡೆದಿದ್ದಾರೆ. ಈಗಾದರೂ ಬಿಬಿಎಂಪಿ ಎಚ್ಚೆತ್ತುಕೊಂಡು ಕೂಡಲೇ ರಸ್ತೆ ಸರಿಪಡಿಸಿ ಅಮಾಯಕರ ಜೀವ ಉಳಿಸಬೇಕು.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು

Edited By : Manjunath H D
PublicNext

PublicNext

21/08/2022 01:18 pm

Cinque Terre

29.33 K

Cinque Terre

1

ಸಂಬಂಧಿತ ಸುದ್ದಿ