ಬೆಂಗಳೂರು: ನಿಮಾನ್ಸ್ ಬೆಸ್ಕಾಂ ಸಬ್ ಸ್ಟೇಷನ್‌ನಲ್ಲಿ ಅಗ್ನಿ ಅನಾಹುತವೊಂದು ಸಂಭವಿಸಿದೆ. ಜಯನಗರ 1ನೇ ಬ್ಲಾಕ್ ನಲ್ಲಿರುವ KPTCL ರಿಸೀವಿಂಗ್ ಸ್ಟೇಷನ್ ನಲ್ಲಿ ಟ್ರಾನ್ಸ್ಫಾರ್ಮರ್ ಹೊತ್ತಿ ಉರಿದಿದೆ.
ಕೂಡಲೇ ಬೆಸ್ಕಾಂ ಸಿಬ್ಬಂದಿ ಎಚ್ಚೆತ್ತುಕೊಂಡು ಕರೆಂಟ್ ಕಟ್ ಮಾಡಿ ಬೆಂಕಿ ಆರಿಸಲು ಮುಂದಾದರು. ಟ್ರಾನ್ಸ್ಫಾರ್ಮರ್ ನಿಂದ ಬಂದ ದಟ್ಟವಾದ ಹೊಗೆ ಕಂಡು ಎಚ್ಚೆತ್ತುಕೊಂಡ ಅಧಿಕಾರಿಗಳು ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದೆ.
ಸದ್ಯಕ್ಕೆ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ ಟ್ರಾನ್ಸ್ಫಾರ್ಮರ್‌ಗೆ ಹೊತ್ತಿರುವ ಬೆಂಕಿಯ ಕಾರಣ ಇನ್ನೂ ತಿಳಿದು ಬಂದಿಲ್ಲ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
05/08/2022 06:18 pm