ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗ್ಲಾಸ್ ಅನ್ ಲೋಡ್ ಮಾಡುವಾಗ ಗ್ಲಾಸ್ ಬಿದ್ದು ವ್ಯಕ್ತಿ ದುರಂತ ಸಾವು!

ಬೆಂಗಳೂರು: ನಿತ್ಯ ಲೋಡ್ ಗಟ್ಟಲೆ ಗ್ಲಾಸ್ ಅನ್ ಲೋಡ್ ಮಾಡ್ತಿದ್ದ ಆ ಕೂಲಿಯ ನಸೀಬ್ ಇವತ್ತು ಕೆಟ್ಟಿತ್ತು ಅನ್ಸುತ್ತೆ. ನಿತ್ಯ ಅನ್ನಕ್ಕೆ ದಾರಿಯಾಗಿದ್ದ ಗ್ಲಾಸೇ ಇವತ್ತು ಆತನ ಪಾಲಿಗೆ ಜವರಾಯನಾಗಿ ಬಂದಿದೆ. ಹೌದು. ಗ್ಲಾಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ವಾಹನದಿಂದ ಗ್ಲಾಸ್ ಅನ್ ಲೋಡ್ ಮಾಡುವಾಗ ಆಯತಪ್ಪಿ ಗಾಜು ಹಾಗೂ ಪ್ಲೈವುಡ್ ಬಿದ್ದು ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.

ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಸಂತ ನಗರದ ಬಿಡಿಎ ಕಚೇರಿ ಬಳಿ ಘಟನೆ ನಡೆದಿದ್ದು, ಅಂಗಡಿಯೊಂದಕ್ಕೆ ಅನ್ ಲೋಡ್ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ. 38 ವರ್ಷದ ಶಂಕರ್ ಸಾವನ್ನಪ್ಪಿದ್ದ ದುದೈರ್ವಿಯಾಗಿದ್ದು, ಇಂದು ಮಧ್ಯಾಹ್ನ ಈ ಘಟನೆ ನಡೆದಿದೆ.

ಅಮೃತಹಳ್ಳಿಯಿಂದ ಸುಬ್ರಮಣ್ಯಪುರದಲ್ಲಿ ಅಂಗಡಿಯೊಂದಕ್ಕೆ ಗ್ಲಾಸ್ ಅನ್ ಲೋಡ್ ಮಾಡಲು ಮಿನಿ ಟೆಂಪೋದಲ್ಲಿ ಬಂದಿದ್ದರು. ಅನ್ ಲೋಡ್ ಮಾಡಲು ಮುಂದಾದಾಗ ಏಕಾಏಕಿ ನೂರಾರು ಕೆ.ಜಿ. ತೂಕದ ಗಾಜುಗಳು ಹಾಗೂ ಪ್ಲೈವುಡ್ ಬಿದ್ದು ಟೆಂಪೋದಲ್ಲಿ ಪ್ರಾಣಬಿಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದು ಮುಂದಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

Edited By : Manjunath H D
PublicNext

PublicNext

03/08/2022 10:26 pm

Cinque Terre

40.75 K

Cinque Terre

0

ಸಂಬಂಧಿತ ಸುದ್ದಿ