ಬೆಂಗಳೂರು: ನಗರದ ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ಕಣ್ಣೂರಮ್ಮ ಬಡಾವಣೆಯಲ್ಲಿ ಶಾದೀಮ್ (50)ಎಂಬ ವ್ಯಕ್ತಿ ಮೂರಡಿ ನೀರಿನ ಗುಂಡಿಗೆ ಬಿದ್ದು ವರ್ಷ ಮೃತಪಟ್ಟಿದ್ದಾನೆ. ನಿನ್ನೆ ರಾತ್ರಿ ಬಿದ್ದ ಮಳೆಗೆ ರಸ್ತೆ ಮಧ್ಯೆ ಮೂರಡಿಯ ಹಳ್ಳದಲ್ಲಿ ನೀರು ತುಂಬಿತ್ತು. ಈ ವೇಳೆ ಅದೇ ರಸ್ತೆಯಲ್ಲಿ ನಡೆದು ಕೊಂಡು ಬರ್ತಿದ್ದ ಶಾದೀಮ್ ಎಂಬ ಚಾಮುಂಡಿನಗರ ವಾಸಿ ಆಯತಪ್ಪಿ ನೀರು ನಿಂತಿದ್ದ ಹಳ್ಳಕ್ಕೆ ಬೋರಲಾಗಿ ಬಿದ್ದಿದ್ದಾನೆ. ನೀರಿನಲ್ಲಿ ಮುಖ ಸಿಲುಕಿದ ಪರಿಣಾಮ ಉಸಿರಾಡಲು ಸಾಧ್ಯವಾಗದೇ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಬೆಳಗಿನ ಜಾವ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯಿಂದ ಪ್ರಕರಣ ಬೆಳಕಿಗೆ ಬಂದಿದೆ. ಕೊಡಿಗೇಹಳ್ಳಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Kshetra Samachara
01/08/2022 01:06 pm