ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಸೇತುವೆ ಉದ್ಘಾಟನೆಯಾದ ದಿನದಿಂದ ಒಂದಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ಕಳಪೆ ಕಾಮಾಗಾರಿಗೆ ಗುರಿಯಾಗಿದ್ದ ಮೇಲ್ಸೇತುವೆ ಮೇಲೆ ಡಾಂಬರ್ ಲಾರಿ ಹೊತ್ತಿ ಉರಿದು ಸುದ್ದಿಗೆ ಕಾರಣವಾಗಿದೆ.
ಬಾಶೆಟ್ಟಿಹಳ್ಳಿ ಬಳಿ ರೈಲ್ವೆ ಮಾರ್ಗ ಹಾದು ಹೋಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ ಕಳಪೆ ಕಾಮಾಗಾರಿಯ ಕಾರಣಕ್ಕೆ ರೈಲ್ವೆ ಮೇಲ್ಸೇತುವೆಯ ತಡೆಗೋಡೆಯ ಶೀಟ್‌ಗಳು ಕಳಚಿ ಬಿದ್ದಿವೆ. ಈಗಾಗಲೇ ನಾಲ್ಕು ಬಾರಿ ಕುಸಿದು ಬಿದ್ದಿದ್ದು ಜನರ ಅಕ್ರೋಶಕ್ಕೆ ಕಾರಣವಾಗಿದೆ. ಮೇಲ್ಸೇತುವೆಯ ಹಳ್ಳ ಗುಂಡಿಗಳು ವಾಹನ ಸವಾರರ ಬಲಿತೆಗೆದುಕೊಂಡಿವೆ.
ಸಾರ್ವಜನಿಕರ ಅಕ್ರೋಶಕ್ಕೆ ತುತ್ತಾದ ಜಿಲ್ಲಾಡಳಿತ ಮೇಲ್ಸೇತುವೆ ಡಾಂಬರಿಕರಣ ಮಾಡಿಸುತ್ತಿದೆ. ಇದೇ ವೇಳೆ ಡಾಂಬರ್ ಕಾಯಿಸುವ ಲಾರಿಯ ಡಿಸೇಲ್ ಟ್ಯಾಂಕರ್‌ಗೆ ಬೆಂಕಿ ಬಿದ್ದು ಹೊತ್ತಿ ಉರಿದಿದೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಯ ಸಂಭವಿಸಿಲ್ಲ. ಬಾಶೆಟ್ಟಿಹಳ್ಳಿ ರೈಲ್ವೆ ಮೇಲ್ಸೇತುವೆ ಈಗಾಗಲೇ ಕಳಪೆ ಕಾಮಾಗಾರಿಗೆ ಸಾಕಷ್ಟು ಸುದ್ದಿ ಮಾಡಿದ್ದು ಈಗ ಡಾಂಬರ್ ಲಾರಿ ಹೊತ್ತಿ ಉರಿದಿದ್ದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
PublicNext
25/07/2022 05:27 pm