ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಲ್ಲಿ ಗೋಡೆ ಕುಸಿದು ಇಬ್ಬರು ಕಾರ್ಮಿಕರು ಸಾವು!

ಬೆಂಗಳೂರು: ಶಿಥಿಲಾವಸ್ಥೆಯ ಕಾಂಪೌಂಡ್ ಕುಸಿದು ಇಬ್ಬರು ಸಾವನ್ನಪ್ಪಿರೋ ಘಟನೆ ದೀಪಾಂಜಲಿ ನಗರದ ಕಿಮ್ಕೊ ಜಂಕ್ಷನ್ ಬಳಿ ನಡೆದಿದೆ. ಶಿಥಿಲವಾಗಿದ್ದ ಗೋಡೆ ಏಕಾಏಕಿ ಕುಸಿದ, ಪರಿಣಾಮ ಗೋಡೆಯ ಕೆಳಗೆ ಸಿಲುಕಿದ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ.ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತರನ್ನು ಬಾಲ ಮತ್ತು ರಾಜಮಣಿ ಎಂದು ಪತ್ತೆ ಮಾಡಿದ್ದಾರೆ.

ಇಬ್ಬರೂ ಕೂಡ ವಾಲ್ಮೀಕಿನಗರದ ನಿವಾಸಿಗಳಾಗಿದ್ದಾರೆ. ಆಗ್ರೊ ಮೋರ್ ಲಿಮಿಟೆಡ್ ಕಂಪನಿಗೆ ಸೇರಿದ ಹಳೆ ಕಟ್ಟಡವಾದ್ರಿಂದ ಗೋಡೆ ಕುಸಿದಿದ್ದು,ಕಂಪನಿಯ ನೆಗ್ಲಿಜೆನ್ಸ್‌ನಿಂದಲೇ ಈ ಇಬ್ಬರು ಪ್ರಾಣ ಬಿಟ್ಟಿದ್ದಾರೆ.

Edited By : Manjunath H D
PublicNext

PublicNext

13/07/2022 06:42 pm

Cinque Terre

38.16 K

Cinque Terre

0

ಸಂಬಂಧಿತ ಸುದ್ದಿ