ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಎರಡು ಬೈಕ್ ನಡುವೆ ಡಿಕ್ಕಿ : ಭೀಕರ ಆಕ್ಸಿಡೆಂಟ್ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ದ್ವಿಚಕ್ರ ವಾಹನಗಳ ಮುಖಾಮುಖಿ ಅಪಘಾತದಲ್ಲಿ ಒಬ್ಬ ಸವಾರ ಮೃತಪಟ್ಟರೆ ಇಬ್ಬರಿಗೆ ಗಾಯಗೊಂಡಿರುವ ಘಟನೆ ವಿಜಯನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಪಟ್ಟೆಗಾರಪಾಳ್ಯ ನಿವಾಸಿ ಮಿಥುನ್ ಮೃತ ಸವಾರನಾಗಿದ್ದು ಮತ್ತಿಬ್ಬರಿಗೆ ತೀವ್ರ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ವರ್ಷದಿಂದ ಪತ್ರಿಕಾ ವಿತರಕನಾಗಿದ್ದ ಮಿಥುನ್, ಸೋಮವಾರ ಬೆಳಗಿನ ಜಾವ ಮನೆ ಮನೆಗೆ ಪತ್ರಿಕೆ ವಿತರಿಸಿ ದ್ವಿಚಕ್ರ ವಾಹನದಲ್ಲಿ ಸ್ನೇಹಿತರ ಜೊತೆಗೆ ಮನೆಗೆ ವಾಪಸ್ ಆಗುತ್ತಿದ್ದ.

ಪ್ರಶಾಂತನಗರ ಕಡೆ ಬರುವಾಗ ಆಯತಪ್ಪಿ ಎದುರಿಗೆ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ರಭಸಕ್ಕೆ ಮೂವರು ಗಾಯಗೊಂಡಿದ್ದರು. ಸ್ಥಳೀಯರು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಮಿಥುನ್ ಮೃತಪಟ್ಟಿದ್ದಾನೆ.

Edited By :
PublicNext

PublicNext

31/05/2022 10:57 pm

Cinque Terre

33.13 K

Cinque Terre

0

ಸಂಬಂಧಿತ ಸುದ್ದಿ