ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೊಡ್ಡಗುಬ್ಬಿ ಕೆರೆಯಲ್ಲಿ ಈಜಲು ಹೋಗಿ ಮುಳುಗಿದ್ದ ಮೂವರಲ್ಲಿ ಸಾಹಿಲ್ ಶವ ಪತ್ತೆ

ಬೆಂಗಳೂರು: ಬೆಂಗಳೂರಿನ ಈಶಾನ್ಯ ವಿಭಾಗದ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿ ದೊಡ್ಡಗುಬ್ಬಿ ಕೆರೆಯಲ್ಲಿ ಈಜಲು ಹೋಗಿದ್ದ ಐದು ಜನ ಯುವಕರಲ್ಲಿ ಮೂರು ಜನ ನೀರು ಪಾಲಾಗಿದ್ದರು. ಸಾರಾಯಿಪಾಳ್ಯ, ಫಾತಿಮಾನಗರದ ಇಮ್ರಾನ್ ಪಾಷಾ, ಮುಬಾರಕ್ ಹಾಗು ಸಾಹಿಲ್ ಎಂಬಾತರು ನೀರಲ್ಲಿ ಮುಳುಗಿ ಸಾವನ್ನಪ್ಪಿದ ದುರ್ದೈವಿಗಳು.

ಈ ದುರಂತ ಸಂಬಂಧ ಕೊತ್ತನೂರು ಪೊಲೀಸರು ‌ಮೂವರು ಬಾಲಕರ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಶೋಧಕಾರ್ಯ ಮುಂದುವರೆಸಿದ್ದರು. ಮಧ್ಯಾಹ್ನ 1ಗಂಟೆಗೆ ದುರಂತ ಸಂಭವಿಸಿದರೆ, 2 ಗಂಟೆಯಿಂದ ಸಂಜೆ 6ರವರೆಗೂ ಶೋಧ ಕಾರ್ಯಾಚರಣೆ ನಡೆಸಿದರೂ ಶವಗಳು ಪತ್ತೆಯಾಗಿರಲಿಲ್ಲ.

ಇಂದು ಎರಡು ಎಸ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ಮುಂದುವರೆದಿತ್ತು. ಬೆಳಿಗ್ಗೆ 11 ಗಂಟೆಗೆ ಸಾಹಿಲ್ ಮೃತದೇಹ ಪತ್ತೆಯಾಗಿದೆ. ಆದರೆ ಇಮ್ರಾನ್ ಪಾಷಾ ಮತ್ತು ಮುಬಾರಕ್ ಮೃತದೇಹಗಳ ಪತ್ತೆಗೆ ನಿರಂತರ ಶೋಧಾಕಾರ್ಯ ಮುಂದುವರೆದಿದೆ.

ಇನ್ನೂ ಇಬ್ಬರ ಮೃತದೇಹಗಳು ಪತ್ತೆಯಾಗುತ್ತವೆ ಎಂಬ ನಿರೀಕ್ಷೆಯಲ್ಲಿ ಮೃತರ ನೂರಾರು ಜನ ಸಂಬಂಧಿಕರು ದೊಡ್ಡಗುಬ್ಬಿ ಬಳಿ ನೆರೆದಿದ್ದಾರೆ.

Suresh Babu Public Next

ಯಲಹಂಕ, ಬೆಂಗಳೂರು

Edited By : Manjunath H D
Kshetra Samachara

Kshetra Samachara

27/05/2022 06:01 pm

Cinque Terre

4.43 K

Cinque Terre

0

ಸಂಬಂಧಿತ ಸುದ್ದಿ