ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಾವಿಗೆ ಈಜಲು ಹೋದ ಯುವಕ ನೀರು ಪಾಲು

ಆನೇಕಲ್: ಆನೇಕಲ್‌ನ ಮುತ್ತಾನಲ್ಲೂರು ಅಮಾನಿ ಕೆರೆ ಪಕ್ಕದ ಬಾವಿಯಲ್ಲಿ ಈಜಲು ಹೋದ ಯುವಕನೊಬ್ಬ ಸಾವಿಗೀಡಾಗಿದ್ದಾನೆ. ಈ ಘಟನೆ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಸರ್ಜಾಪುರದ ಕಾಡ ಅಗ್ರಹಾರ ನಿವಾಸಿ 23 ವರ್ಷದ ಮಂಜುನಾಥ ಸಾವಿಗೀಡಾದ ಜೆಸಿಬಿ ಚಾಲಕನಾಗಿದ್ದಾನೆ. ಇನ್ನೂ ಈತನ ಸ್ನೇಹಿತರೂ ಈಜಲು ಹೊರಟಿದ್ದು ಬಾವಿಯ ತಳದಲ್ಲಿ ಮಣ್ಣು ತೆಗೆದುಕೊಂಡು ಬರುತ್ತೇನೆಂದು ಡೈ ಹೊಡೆದವನು ಈಚೆಗೆ ಬಾರದ್ದರಿಂದ ಕಂಗಾಲಾದ ಸ್ನೇಹಿತರು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಮೃತರ ಸಂಬಂದಿಗಳು ತಿಳಿಸಿದ್ದಾರೆ.

ಮತ್ತೊಂದು ಮಾಹಿತಿಯಂತೆ ಈಜಲು ಹೊರಟಿದ್ದ ಬಾವಿಯಲ್ಲಿ ಬಾವಿಯ ಮಾಲೀಕ ಹರೀಶ್ ರೆಡ್ಡಿ ಈಜಲು ಯಾರಿಗೂ ಅನುಮತಿಸಿರದ ಕಾರಣಕ್ಕೆ ಬಾವಿಯಲ್ಲಿ ಜಾಲಿಮುಳ್ಳು ಹಾಕಿದ್ದರು. ಸಾವಿಗೀಡಾದ ಮಂಜುನಾಥನನ್ನು ಹೊರತೆಗೆಯಲು ಇದರಿಂದ ಅಗ್ನಿಶಾಮಕ ದಳ ಮತ್ತು ಸೂರ್ಯಸಿಟಿ ಪೊಲೀಸರು ಹರಸಾಹಸ ಪಡುವಂತಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

Edited By :
Kshetra Samachara

Kshetra Samachara

25/05/2022 10:53 pm

Cinque Terre

3.05 K

Cinque Terre

0

ಸಂಬಂಧಿತ ಸುದ್ದಿ