ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಸರ್ಕಾರದ ವ್ಯಾಕ್ಸಿನೇಷನ್ ವ್ಯಾನ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ನೆಲಮಂಗಲ: ದ್ವಿಚಕ್ರವಾಹನಕ್ಕೆ ಸರ್ಕಾರದ ವ್ಯಾಕ್ಸಿನೇಷನ್ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನೆಲಮಂಗಲ ತಾಲ್ಲೂಕು ಡಾಬಸ್ ಪೇಟೆಯ ಶಿವಗಂಗೆ ವೃತ್ತದ ಬಳಿ ನಡೆದಿದೆ.

ನೆಲಮಂಗಲ ತಾಲ್ಲೂಕು ತ್ಯಾಮಗೊಂಡ್ಲುವಿನ ತಾವರೆಕೆರೆ ಗ್ರಾಮದ ನಿವಾಸಿ 48 ವರ್ಷದ ವೆಂಕಟೇಶ್ ಮೂರ್ತಿ ಮೃತಪಟ್ಟ ವ್ಯಕ್ತಿ. ಇನ್ನು ಮದುವೆ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಈ ಸಂಬಂಧ ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Manjunath H D
PublicNext

PublicNext

19/05/2022 07:49 pm

Cinque Terre

48.33 K

Cinque Terre

0

ಸಂಬಂಧಿತ ಸುದ್ದಿ